ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………..
ಹೊಸದಿಗಂತ ಆನ್ ಲೈನ್ ಡೆಸ್ಕ್:
ಇಡೀ ದೇಶವೇ ಕೊರೋನಾ 2 ಅಲೆಯ ಹೋರಾಟದಲ್ಲಿದ್ದು, ಅನೇಕ ತಜ್ಞರು ಎರಡು ಮಾಸ್ಕ್ಗಳನ್ನ ಧರಿಸುವಂತೆ ಸಲಹೆಯನ್ನ ನೀಡ್ತಿದ್ದಾರೆ.
ಅಧ್ಯಯನದ ಪ್ರಕಾರ ಬಿಗಿಯಾಗಿ ಜೋಡಿಸಲಾಗಿರುವ ಎರಡು ಲೇಯರ್ ಮಾಸ್ಕ್ ಧರಿಸುವುದರಿಂದ ಕೊರೋನಾ ಸೋಂಕನ್ನು ತಡೆಯಬಹುದು. ಸೋಂಕಿನ ಕಣಗಳನ್ನು ಫಿಲ್ಟರ್ ಮಾಡುವ ಮೂಲಕ ನಿಮಗಾಗುವ ಅಪಾಯವನ್ನು ಕಡಿಮೆ ಮಾಡುತ್ತದೆ.ಹಾಗೆಯೇ ನೇರವಾಗಿ ವೈರಸ್ ನಿಮ್ಮ ಮೂಗು ಅಥವಾ ಬಾಯಿ ಮೂಲಕ ದೇಹವನ್ನು ಸೇರುವುದಿಲ್ಲ.
ಹಾಗಿದ್ದರೆ ಎಂತಾ ಮಾಸ್ಕ್ ಧರಿಸಬೇಕು, ಯಾವುದಾದರೂ ಎರಡು ಮಾಸ್ಕ್ ಧರಿಸಬಹುದೇ, ಮಾಸ್ಕ್ ಎಷ್ಟು ದಪ್ಪವಿರಬೇಕು ಹೀಗೆ ಸಾಕಷ್ಟು ಪ್ರಶ್ನೆಗಳು ಉದ್ಭವಾಗುವುದು ಸಹಜ ಅದಕ್ಕಾಗಿ ಕೇಂದ್ರ ಸರ್ಕಾರ ಡಬಲ್ ಮಾಸ್ಕ್ ಧರಿಸುವ ವೇಳೆಯಲ್ಲಿ ಜನತೆ ಏನನ್ನ ಮಾಡಬೇಕು ಹಾಗೂ ಯಾವುದನ್ನ ಮಾಡಬಾರದು ಅನ್ನೋದರ ಕುರಿತು ಮಾಹಿತಿಯನ್ನ ರಿಲೀಸ್ ಮಾಡಿದೆ.
- ಡಬಲ್ ಮಾಸ್ಕ್ ಹಾಕುವವರು ಒಂದು ಸರ್ಜಿಕಲ್ ಮಾಸ್ಕ್ ಹಾಗೂ 2-3 ಪದರಗಳುಳ್ಳ ಬಟ್ಟೆಯ ಮಾಸ್ಕ್ನ್ನು ಹೊಂದಿರಬೇಕು.
- ಮೂಗಿನ ಬಳಿಯಲ್ಲಿ ಗಟ್ಟಿಯಲ್ಲಿ ಪ್ರೆಸ್ ಮಾಡಿಕೊಳ್ಳುವ ವ್ಯವಸ್ಥೆ ಇರಬೇಕು.
- ಉಸಿರಾಟಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು.
- ಬಟ್ಟೆ ಮಾಸ್ಕ್ನ್ನು ಬಳಸಿದ ಬಳಿಕ ತೊಳೆಯಬೇಕು.
- ಒಂದೇ ಬಗೆಯ ಮಾಸ್ಕ್ಗಳಿಂದ ಡಬಲ್ ಮಾಸ್ಕ್ ಮಾಡಿಕೊಳ್ಳಬೇಡಿ.
- ಒಂದೇ ಮಾಸ್ಕ್ನ್ನು ನಿರಂತರ ಎರಡು ದಿನಗಳ ಕಾಲ ಬಳಕೆ ಮಾಡಬೇಡಿ.
- ನಿತ್ಯವೂ ಮಾಸ್ಕ್ ತೊಳೆಯಿರಿ