ಹೊಸದಿಗಂತ ಆನ್ಲೈನ್ನ ವಿನಮ್ರ ವಿನಂತಿ…
ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………………………….
ಹೊಸದಿಗಂತ ಆನ್ ಲೈನ್ ಡೆಸ್ಕ್:
ದೇಶದಲ್ಲಿ ನಾಳೆಯಿಂದ 18 ವರ್ಷ ಮೇಲ್ಪಟ್ಟವರಿಗೆ ಕೊರೋನಾ ಲಸಿಕೆ ನೀಡಲಾಗುವುದು ಎಂದು ಕೇಂದ್ರ ಸರಕಾರ ಘೋಷಣೆ ಮಾಡಿದ್ದು, ಈ ಹಿನ್ನೆಲೆ ಎಲ್ಲ ರಾಜ್ಯ ಸರಕಾರಗಳು ಲಸಿಕೆ ನೀಡಲು ಸಿದ್ಧತೆ ನಡೆಸುತ್ತಿದೆ. ಆದರೆ ಕರ್ನಾಟಕ ರಾಜ್ಯದಲ್ಲಿ ನಾಳೆ ಲಸಿಕೆ ಸಿಗುವುದು ಡೌಟ್…
ಹೌದು, ರಾಜ್ಯದಲ್ಲಿ ಲಸಿಕೆ ಪೂರೈಕೆ ಆಗದ ಕಾರಣದಿಂದಾಗಿ ನಾಳೆಯಿಂದ 18 ರಿಂದ 44 ವರ್ಷದವರೆಗಿನ ಜನರಿಗೆ ಕೊರೋನಾ ಲಸಿಕೆ ಸಿಗೋದು ಡೌಟ್ ಎಂದು ಹೇಳಲಾಗುತ್ತಿತ್ತು. ಈ ಕುರಿತಂತೆ ಸಿಎಂ ಯಡಿಯೂರಪ್ಪ ಮಾತನಾಡಿ, ನಾಳೆಯಿಂದ ಕೊರೋನಾ ಲಸಿಕೆ ಸಿಕ್ಕಿದ್ದರೇ ಲಸಿಕೆ ನೀಡಿಕೆ ಆರಂಭವಾಗುತ್ತಿತ್ತು. ಆದ್ರೆ ಲಸಿಕೆ ಸಿಗೋದು ವಿಳಂಬ ಆಗಿರುವ ಕಾರಣ ಲಸಿಕೆ ನೀಡೋದಕ್ಕೆ ಆಗ್ತಾ ಇಲ್ಲ ಎಂದು ಹೇಳಿದ್ದಾರೆ.
ಲಸಿಕೆ ಖರೀದಿಗೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಲಸಿಕೆ ರಾಜ್ಯಕ್ಕೆ ಬರೋದು ವಿಳಂಬ ಆಗಿದೆ. ಹೀಗಾಗಿ ನಾಳೆಯಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಿಕೆಯಲ್ಲಿ ತಡವಾಗುತ್ತಿದೆ. ಇದನ್ನು ಬಿಟ್ಟು ಬೇರೆ ಕಾರಣ ಇಲ್ಲ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಎಳೆದು ತರೋ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.