Friday, August 19, 2022

Latest Posts

ಕೊರೋನಾ ರೋಗಿಗಳ ಚೇತರಿಕೆಗೆ ‘ಆ್ಯಂಟಿ ಕೋವಿಡ್​ ಡ್ರಗ್’ ರೂಪಿಸಿದ ಡಿಆರ್​ಡಿಒ: ತುರ್ತು ಬಳಕೆಗೆ ಅನುಮೋದನೆ!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಕೊರೋನಾ ರೋಗಿಗಳ ಚೇತರಿಕೆಗೆ ಸಹಾಯ ಮಾಡುವ ಆ್ಯಂಟಿ ಕೋವಿಡ್​ ಡ್ರಗ್ ಒಂದರ ತುರ್ತು ಬಳಕೆಗೆ ಭಾರತದ ಡ್ರಗ್​ ಕಂಟ್ರೋಲರ್​ ಜನರಲ್ ಅನುಮೋದನೆ ನೀಡಿದ್ದಾರೆ.
ಈ ಔಷಧವನ್ನು ಡಿಫೆನ್ಸ್​ ರಿಸರ್ಚ್​ ಅಂಡ್ ಡೆವಲಪ್​ಮೆಂಟ್​ ಆರ್ಗನೈಸೇಷನ್(ಡಿಆರ್​ಡಿಒ) ಮತ್ತು ಹೈದರಾಬಾದ್​ನ ಡಾ.ರೆಡ್ಡೀಸ್ ಲ್ಯಾಬರೇಟರೀಸ್​ ಜಂಟಿಯಾಗಿ ರೂಪಿಸಿವೆ.
‘2-ಡಿಆಕ್ಸಿ-ಡಿ-ಗ್ಲೂಕೋಸ್’ ​(2ಡಿಜಿ) ಡ್ರಗ್​ನ ಚಿಕಿತ್ಸೀಯ ಮಾದರಿಯಾಗಿರುವ ಈ ಔಷಧಿಯ ಕ್ಲಿನಿಕಲ್​ ಟ್ರಯಲ್​​ಗಳ ಸಕಾರಾತ್ಮಕ ಫಲಿತಾಂಶಗಳನ್ನು ಪರಿಗಣಿಸಿ ಅನುಮೋದನೆ ನೀಡಲಾಗಿದೆ.
ಸಾಚೆಟ್​ನಲ್ಲಿ ಪೌಡರ್​ ರೂಪದಲ್ಲಿ ಬರುವ ಈ ಆ್ಯಂಟಿ ಕೋವಿಡ್​ ಔಷಧಿಯನ್ನು ರೋಗಿಗಳು ನೀರಿನಲ್ಲಿ ಬೆರೆಸಿ ನುಂಗಬಹುದಾಗಿದೆ. ಈ ಆ್ಯಂಟಿ ಕೋವಿಡ್​ ಡ್ರಗ್​ನಲ್ಲಿರುವ ಒಂದು ಮಾಲಿಕ್ಯೂಲ್ ಆಸ್ಪತ್ರೆಗೆ ದಾಖಲಾಗಿರುವರೋಗಿಗಳ ಶೀಘ್ರ ಚೇತರಿಕೆಯಲ್ಲಿ ಸಹಾಯ ಮಾಡುತ್ತದೆ ಮತ್ತು ಚಿಕಿತ್ಸಕ ಆಕ್ಸಿಜನ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಎಂದು ಕ್ಲಿನಿಕಲ್​ ಟ್ರಯಲ್​ ಫಲಿತಾಂಶಗಳು ತಿಳಿಸಿವೆ. ಈ ಬಗ್ಗೆ ಡಿಆರ್​ಡಿಒ ಮಾಹಿತಿ ನೀಡಿ ವಿಡಿಯೋ ಒಂದನ್ನು ಟ್ವೀಟ್​ ಮಾಡಿದೆ.
ಮೇ ಮತ್ತು ಅಕ್ಟೋಬರ್​​ಗಳಲ್ಲಿ 110 ರೋಗಿಗಳ ಮೇಲೆ ಎರಡನೇ ಸುತ್ತಿನ ಟ್ರಯಲ್​ಗಳನ್ನು ನಡೆಸಿದ್ದು,ರೋಗಿಗಳಿಗೆ ನೀಡಲು ಸುರಕ್ಷಿತವಾಗಿದೆ ಮತ್ತು ಅವರ ಚೇತರಿಕೆಯಲ್ಲಿ ಮಹತ್ವದ ಕೊಡುಗೆ ನೀಡುತ್ತದೆ ಎಂಬುದು ತಿಳಿದುಬಂದಿದೆ. ಆರು ಆಸ್ಪತ್ರೆಗಳಲ್ಲಿ ಮೂರನೇ ಸುತ್ತಿನ ಟ್ರಯಲ್​​ ನಡೆಸಲಾಯಿತು ಮತ್ತು ದೇಶದ ವಿವಿಧೆಡೆಯ 11 ಆಸ್ಪತ್ರೆಗಳಲ್ಲಿ ಡೋಸ್​ ರೇಂಜಿಂಗ್​ ನಡೆಸಲಾಯಿತು ಎಂದು ತಿಳಿದುಬಂದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!