ಡಾ. ಅಂಬರೀಶ್ ಹೆಸರಲ್ಲಿ ಫೌಂಡೇಷನ್: ವಿದ್ಯಾರ್ಥಿಗಳ ದತ್ತು ಪಡೆದು ಶಿಕ್ಷಣ ನೀಡುವೆ ಎಂದ ಸುಮಲತಾ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಮಂಡ್ಯದ ಮಣ್ಣಿನ ಮಗ ಅಂಬರೀಶ್ ಅವರ ಹೆಸರಲ್ಲಿ ಡಾ. ಅಂಬರೀಶ್ ಫೌಂಡೇಷನ್ ಆರಂಭಿಸಲಾಗಿದ್ದು, ವಿದ್ಯಾರ್ಥಿಗಳನ್ನು ದತ್ತು ಪಡೆದು ಶಿಕ್ಷಣ ಕೊಡಿಸಲಾಗುವುದು. ಇತರೆ ಸಾಮಾಜಿಕ ಸೇವೆಗಳನ್ನೂ ಮಾಡಲಾಗುವುದು ಎಂದು ನಟಿ ಹಾಗೂ ಸಂಸದೆ ಸುಮಲತಾ ಅಂಬರೀಶ್ ಹೇಳಿದರು.

ಮಂಡ್ಯದಲ್ಲಿ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾವತ್ತೂ ಒಬ್ಬ ವ್ಯಕ್ತಿಗೆ ಅಧಿಕಾರ ಶಾಶ್ವತ ಅಲ್ಲ, ಜನರ ಪ್ರೀತಿ ಶಾಶ್ವತ. ಎಲ್ಲ ಮನೆಯಲ್ಲಿ ಮಕ್ಕಳು ಜನಿಸೋದು ಸಾಮಾನ್ಯ. ಆದರೆ, ಉತ್ತಮ ವ್ಯಕ್ತಿತ್ವ ಇರುವ ಮಕ್ಕಳು ಜನಿಸಿವುದು ಅಪರೂಪ. ಅಂಬರೀಶ್ ಅದನ್ನ ಪಡೆದುಕೊಂಡು ಬಂದವರು. ನನಗಿಂತ ಮಂಡ್ಯ ಜಿಲ್ಲೆಯ ಜನರಿಗೆ ಅವರ ಬಗ್ಗೆ ಗೊತ್ತಿದೆ. ಡಾ.ಅಂಬರೀಶ್ ಫೌಂಡೇಶನ್ ಸ್ಥಾಪನೆ ಮಾಡಿದ್ದೇವೆ. ಅವರ ಸಾಧನೆಗಳನ್ನ ಮುಂದುವರಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಡಾ. ಅಂಬರೀಶ್ ಫೌಂಡೇಷನ್‌ನಿಂದ ವಿದ್ಯಾರ್ಥಿಗಳನ್ನ ದತ್ತು ತೆಗೆದುಕೊಂಡು ವಿದ್ಯಾಭ್ಯಾಸ ಕೊಡಿಸುವ ಕೆಲಸ ಮಾಡುತ್ತೇವೆ. ನಮ್ಮ ಫೌಂಡೇಶನ್ ವತಿಯಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದರು.

ಮಂಡ್ಯ ಜಿಲ್ಲೆಯ ಜನತೆ ಅಂಬರೀಶ್ ಅವರನ್ನು ಪ್ರೀತಿ ಅಭಿಮಾನ ಕೊಟ್ಟು ಬೆಳೆಸಿದವರು. ಅಂಬರೀಶ್ ಅವರನ್ನ ರಾಜ್ಯದ ಜನರು ನೋಡುವುದಕ್ಕೆ ಮುಗಿ ಬೀಳುತ್ತಿದ್ದರು. ಆದರೆ, ಅಂಬರೀಶ್ ಮಂಡ್ಯದವರನ್ನ ನೋಡಲು ಇಷ್ಟ ಪಡುತ್ತಿದ್ದರು. ಅವರ ಹುಟ್ಟು ಹಬ್ಬದ ದಿನ ಸಾವಿರಾರು ಜನರು ನೋಡೋಕೆ ಬರೋರು. ಅವರ ಅಗಲಿಕೆ ಬಳಿಕ ಮಂಡ್ಯದಲ್ಲೆ ಅಂಬರೀಶ್ ಹುಟ್ಟುಹಬ್ಬ ಆಚರಣೆ ಮಾಡಲಾಗುತ್ತಿದೆ. ನಿಮ್ಮ ಜೊತೆ ನಾವು ಹುಟ್ಟುಹಬ್ಬ ಆಚರಣೆ ಮಾಡ್ತಿದ್ದೇವೆ‌. ಅಖಿಲ ಅಂಬರೀಶ್ ಅಭಿಮಾನಿಗಳ ಸಂಘದ ವತಿಯಿಂದ ಒಳ್ಳೆಯ ಕಾರ್ಯಕ್ರಮ ನಡೆಯುತ್ತಿದೆ. ನಿಮ್ಮೆಲ್ಲರಿಗೆ ನನ್ನ ಧನ್ಯವಾದ ಹೇಳ್ತೇನೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!