Wednesday, June 29, 2022

Latest Posts

ಡಾ. ಜಿ.ವಿ. ಜೋಶಿ ರೋಟರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿಗೆ ಕೊರೋನಾ ದೃಢ

 ಹೊಸ ದಿಗಂತ ವರದಿ, ಹುಬ್ಬಳ್ಳಿ:

ಇಲ್ಲಿಯ ಆದರ್ಶನಗರದ ಡಾ. ಜಿ.ವಿ. ಜೋಶಿ ರೋಟರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿಗೆ ಕೊರೋನಾ ಸೋಂಕು ದೃಢಪಟ್ಟಿದೆ.
ಕೊರೋನಾ ಸೋಂಕಿತ 9ನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಿದ್ದು, ಇತ್ತೀಚೆಗೆ ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನಲ್ಲಿ ಈ ವಿದ್ಯಾರ್ಥಿ ಸಹೋದರಿಗೂ ಸೋಂಕು ದೃಢಪಟ್ಟಿದೆ ಎನ್ನಲಾಗುತ್ತಿದೆ.
ವಿದ್ಯಾರ್ಥಿಗೆ ಸೋಂಕು ದೃಢವಾದ ತಕ್ಷಣ ಅವನ ಪಾಲಕರು ಶಾಲೆಯ ಸಿಬ್ಬಂದಿಗೆ ತಿಳಿಸಿದ್ದು, ತಕ್ಷಣ ಶಾಲೆ ಆಡಳಿತ ಮಂಡಳಿ ರಜೆ ಘೋಷಣೆ ಮಾಡಿ ಬುಧವಾರ ಶಾಲೆಗೆ ಬಂದ ವಿದ್ಯಾರ್ಥಿಗಳನ್ನು ಮರಳಿ ಕಳುಹಿಸಲಾಗಿದೆ. ಈ ವಿಷಯ ಶಾಲಾ ಸಿಬ್ಬಂದಿ ಕ್ಷೇತ್ರ ಶಿಕ್ಷಣ ಅಕಾರಿಗೆ ತಿಳಿಸಿದ್ದು, ಸ್ಥಳಕ್ಕೆ ನಗರದ ತಹಶೀಲ್ದಾರ್ ಶಶಿಧರ ಮಾಂಡ್ಯಾಳ ಭೇಟಿ ನೀಡಿ ಶಾಲೆಗೆ ಬರುವ ಎಲ್ಲ ವಿದ್ಯಾರ್ಥಿಗಳಿಗೆ ಆರ್.ಟಿಪಿಸಿಆರ್ ಮಾಡಿಸುವಂತೆ ತಿಳಿಸಿದ್ದಾರೆ.
ಸೋಂಕು ದೃಢ ಪಟ್ಟ ವಿದ್ಯಾರ್ಥಿ ಆರೋಗ್ಯ ಸ್ಥಿತಿ ಸಹಜವಾಗಿದೆ. ಡಿ. ೬(ಸೋಮವಾರ) ವರೆಗೆ ರಜಾ ನೀಡಲಾಗಿದ್ದು, ಮುಂದೆ ಪರಿಸ್ಥಿತಿ ನೋಡಿಕೊಂಡು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಎನ್‌ಎಲ್‌ಇ ಸಂಸ್ಥೆಯ ಗೌರವ ಕಾರ್ಯದರ್ಶಿ ರಾಜಾ ದೇಸಾಯಿ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss