ಹೊಸದಿಗಂತ ಆನ್ ಲೈನ್ ಡೆಸ್ಕ್:
ಕೊರೋನಾ ಲಸಿಕೆಗಳ ಕೊರತೆಯಿಂದಾಗಿ ರಾಜ್ಯವು ತೀವ್ರ ಸಮಸ್ಯೆಗೆ ಸಿಕ್ಕಿದೆ ಎಂಬ ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೊಪೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್, ‘ಲಸಿಕೆ ಕೊರತೆಯ ಆರೋಪವು ಸಂಪೂರ್ಣವಾಗಿ ಆಧಾರರಹಿತವಾಗಿದೆ’ ಎಂದು ಹೇಳಿದ್ದಾರೆ.
ಕಳೆದ ವರ್ಷದುದ್ದಕ್ಕೂ, ಕೇಂದ್ರ ಆರೋಗ್ಯ ಸಚಿವರಾಗಿ, ನಾನು ವೈರಸ್ ವಿರುದ್ಧ ಹೋರಾಡುವಲ್ಲಿ ಮಹಾರಾಷ್ಟ್ರ ಸರ್ಕಾರದ ವೈಫಲ್ಯ ಹಾಗೂ ವಂಚನೆಯ ವಿಧಾನಗಳಿಗೆ ಸಾಕ್ಷಿಯಾಗಿದ್ದೇನೆ. ಅವರ ಕೊರತೆಯ ಆರೋಪವು ವೈರಸ್ ವಿರುದ್ಧ ಹೋರಾಡುವ ದೇಶದ ಪ್ರಯತ್ನಗಳನ್ನು ಒಂದೇ ಏಟಿಗೆ ತಳ್ಳಿಹಾಕುವುದಕ್ಕಾಗಿ ಇದೆ ಸಚಿವರು ಹೇಳೀದ್ದಾರೆ.
ರಾಜ್ಯ ಸರ್ಕಾರವು ಮಹಾರಾಷ್ಟ್ರರನ್ನು ಹೇಗೆ ಅಪಾಯಕ್ಕೆ ಸಿಲುಕಿಸುತ್ತಿದೆ ಎಂಬುದನ್ನು ನೋಡಿದರೆ ಆಘಾತಕಾರಿಯಾಗಿದೆ ಎಂದರು.
ಸಾಂಕ್ರಾಮಿಕ ಹರಡುವಿಕೆಯನ್ನು ನಿಯಂತ್ರಿಸುವಲ್ಲಿ ಮಹಾರಾಷ್ಟ್ರ ಸರ್ಕಾರ ಮತ್ತೆ ಮತ್ತೆ ವಿಫಲವಾಗಿತ್ತಿರುವುದರಿಂದ ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನದ ಸಲುವಾಗಿ ಲಸಿಕೆ ಕೊರತೆಯ ಮಾತನಾಡುತ್ತಿದ್ದಾರೆ.ಒಟ್ಟಾರೆಯಾಗಿ, ರಾಜ್ಯವು ಒಂದು ಬಿಕ್ಕಟ್ಟಿನಿಂದ ಇನ್ನೊಂದಕ್ಕೆ ಹೊರಳುತಿರುವಾಗ , ರಾಜ್ಯ ನಾಯಕತ್ವವು ಸಂತೋಷದಿಂದ ನಿದ್ರಿಸುತ್ತಿದೆ ಎಂದು ತೋರುತ್ತಿದೆ ಎಂದರು.