Saturday, July 2, 2022

Latest Posts

ಕುಮಾರಸ್ವಾಮಿಗೆ ಬೆಡ್ ಇಲ್ಲ ಎಂದ ಆಸ್ಪತ್ರೆ: ಸಚಿವ ಡಾ. ಸುಧಾಕರ್ ಪ್ರತಿಕ್ರಿಯೆ…

ಹೊಸದಿಗಂತ ಆನ್ ಲೈನ್ ಡೆಸ್ಕ್:

ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಶನಿವಾರ ಕೊರೋನಾ ಸೋಂಕು ದೃಢಪಟ್ಟಿದ್ದು, ಚಿಕಿತ್ಸೆಗೆ ಮಣಿಪಾಲ್ ಆಸ್ಪತ್ರೆ ಸೇರಲು ಬಯಸಿದ ಅವರಿಗೆ ಬೆಡ್ ಸಿಕ್ಕಿಲ್ಲ ಎಂಬ ವಿಚಾರದ ಕುರಿತು ರಾಜ್ಯ ಆರೋಗ್ಯ ಸಚಿವ ಡಾ. ಸುಧಾಕರ್ ಪ್ರತಿಕ್ರಿಯೆ ನೀಡಿದ್ದಾರೆ.
ಶನಿವಾರ ವಿಧಾನಸೌಧದಲ್ಲಿ ಮಾತನಾಡಿದ ಅವರು, ‘ನಾನೇ ಖುದ್ದಾಗಿ ಕುಮಾರಸ್ವಾಮಿ ಅವರ ಹತ್ತಿರ ಮಾತಾಡಿದ್ದೇನೆ. ಮಣಿಪಾಲ್ ಆಸ್ಪತ್ರೆಯವರ ಜತೆ ಕೂಡ ಮಾತಾಡಿದ್ದೇನೆ. ನನಗೆ ಸರ್ಜರಿಯಾಗಿದೆ. ಅಪೋಲೊದಲ್ಲಿ ಸಂಬಂಧಪಟ್ಟ ವೈದ್ಯರಿದ್ದಾರೆ. ಹೀಗಾಗಿ ನಾನು ಅಲ್ಲೇ ಹೋಗುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು’ ಎಂದು ಸ್ಪಷ್ಟನೆ ನೀಡಿದ್ದಾರೆ.
ಕುಮಾರ ಸ್ವಾಮಿ ಅವರಿಗೆ ಅಪೋಲೊ ಆಸ್ಪತ್ರೆಯ ಸಿಇಒ ಬಳಿ ಸರ್ಕಾರದ ಪರವಾಗಿ ಮಾತಾಡುತ್ತೇವೆ ಎಂದು ತಿಳಿಸಿ, ತಾವು ಆದಷ್ಟು ಬೇಗ ಗುಣಮುಖರಾಗಿ ಬನ್ನಿ ಅಂತ ಹೇಳಿದ್ದೆ. ಅವರಿಗೆ ಈಗ ಮಣಿಪಾಲ್ ನಲ್ಲಿ ಹಾಸಿಗೆ ಸಿದ್ಧವಿದೆ. ಈ ಮಾಹಿತಿಯನ್ನು ಖುದ್ದಾಗಿ ಎಚ್‌ಡಿಕೆಯಿಂದ ಪಡೆದಿದ್ದೇನೆ ಎಂದು ಹೇಳಿದರು. ಆಸ್ಪತ್ರೆಯಲ್ಲಿ ಕುಮಾರಸ್ವಾಮಿ ಅವರಿಗೆ ಹಾಸಿಗೆ ಸಿಗುತ್ತಿಲ್ಲ ಎಂಬುದು ಸರಿಯಲ್ಲ, ಇದು ಅನಗತ್ಯ ಎಂದಿದ್ದಾರೆ.
ಕೊರೊನಾ ದೃಢಪಡುತ್ತಿದ್ದಂತೆ ಮಣಿಪಾಲ್ ಆಸ್ಪತ್ರೆ ಸೇರಲು ನಿರ್ಧರಿಸಿದ ಕುಮಾರಸ್ವಾಮಿ ಅವರು ಸಂಬಂಧಿಸಿದವರನ್ನು ಸಂಪರ್ಕಿಸಿದರೆ, ಬೆಡ್ ಇಲ್ಲ ಎಂಬ ಉತ್ತರ ಸಿಕ್ಕಿದ್ದು, ಈ ವಿಷಯ ತಿಳಿದ ಕೂಡಲೇ ಆರೋಗ್ಯ ಸಚಿವ ಸುಧಾಕರ್ ಅವರು ಮಣಿಪಾಲ್ ಆಸ್ಪತ್ರೆಯಲ್ಲಿ ಹಾಸಿಗೆ ದೊರಕಿಸಿಕೊಡಲು ಯತ್ನಿಸಿದ್ದಾರಾದರೂ ಅದು ಫಲ ಕೊಟ್ಟಿಲ್ಲ ಎಂಬ ಮಾತು ಕೇಳಿಬಂದಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss