Sunday, July 3, 2022

Latest Posts

ಡಾ.ಸಂಗನಬಸವ ಸ್ವಾಮೀಜಿ ನಿಧನ: ಗಣ್ಯರ ಸಂತಾಪ

ಹೊಸದಿಗಂತ ವರದಿ, ಬಳ್ಳಾರಿ:

ಹೊಸಪೇಟೆ ಹಾಗೂ ಬಳ್ಳಾರಿಯ ಕೊಟ್ಟೂರು ಸ್ವಾಮೀ ಶ್ರೀಮಠದ ಜಗದ್ಗುರು ಹಾಗೂ ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನ ಶಿವಯೋಗಿ ಮಂದಿರದ ಪೀಠಾಧ್ಯಕ್ಷರಾದ ಶ್ರೀ ಡಾ.ಸಂಗನಬಸವ ಮಹಾಸ್ವಾಮೀಜಿ ಅವರು ಸೋಮವಾರ ‌ನಿಧನರಾಗಿದ್ದು, ಸಚಿವರು, ಶಾಸಕರು, ವಿವಿಧ ಮಠದ ಸ್ವಾಮಿಜಿಗಳು, ವಿವಿಧ ಚುನಾಯಿತ ಜನಪ್ರತಿನಿಧಿಗಳು, ಉದ್ಯಮಿಗಳು, ಗಣ್ಯರು ಸ್ವಾಮೀಜಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಸ್ವಾಮೀಜಿ ಅವರು, ಗದಗ ಜಿಲ್ಲೆಯ ಹಾಳಕೆರೆ ಅನ್ನದಾನೇಶ್ವರ ಶ್ರೀ ಮಠದ ಪೀಠಾಧಿಪತಿಗಳಾಗಿ 180ಕ್ಕೂ ಹೆಚ್ಚು ಮಠಗಳಲ್ಲಿ ದಾಸೋಹ ಹಾಗೂ ಶೈಕ್ಷಣಿಕ ಕ್ರಾಂತಿಯನ್ನೇ ಮೂಡಿಸಿದ್ದರು. ಇದರ ಜೊತೆಗೆ ಹಸ್ತಪ್ರತಿ ಗಳನ್ನು ಸಂರಕ್ಷಣೆ ಮಾಡಿ ಪುಸ್ತಕ ರೂಪದಲ್ಲಿ ಪ್ರಕಟಿಸಿದ ಮಹಾಸಂತರು ಇವರಾಗಿದ್ದರು. ಭೌತಿಕವಾಗಿ ನಮ್ಮಿಂದ ದೂರವಾಗಿದ್ದರೂ, ಲಕ್ಷಾಂತರ ಜನರ ಹೃದಯದಲ್ಲಿ ಅಮರರಾಗಿ ಉಳಿಸಿದ್ದಾರೆ. ಇಂತಹ ಮಹಾತ್ಮರು ಮತ್ತೋಮ್ಮೆ ಅವತರಿಸಲಿ ಎಂದು, ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ಸಂಸದ ವೈ.ದೇವೇಂದ್ರಪ್ಪ, ಶಾಸಕರಾದ ಜಿ.ಕರುಣಾಕರ ರೆಡ್ಡಿ, ಭೀಮಾನಾಯ್ಕ್, ಎನ್.ವೈ.ಗೋಪಾಲಕೃಷ್ಣ, ಈ.ತುಕಾರಾಂ, ಜೆ.ಎನ್.ಗಣೇಶ್, ಜಿ.ಸೋಮಶೇಖರ್ ರೆಡ್ಡಿ, ಬಿ.ನಾಗೇಂದ್ರ, ಎಂ.ಎಸ್.ಸೋಮಲಿಂಗಪ್ಪ, ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಚಾನಾಳ್ ಶೇಖರ್, ಕಲ್ಯಾಣ ಶ್ರೀ ಮಠದ ಕಲ್ಯಾಣ ಸ್ವಾಮಿಜಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss