ದ್ರೌಪದಿ ನನ್ನ ಮೂಲ ಹೆಸರಲ್ಲ! ಹೀಗಂದಿದ್ಯಾಕೆ ಭಾರತದ ನೂತನ ರಾಷ್ಟ್ರಪತಿ ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಭಾರತದ 15ನೇ ರಾಷ್ಟ್ರಪತಿಯಾಗಿ ಇಂದು ಪ್ರಮಾಣವಚನ ಸ್ವೀಕರಿಸಿರುವ ದ್ರೌಪದಿ ಮುರ್ಮುರವರು ಆಶ್ಚರ್ಯಕರ ಸಂಗತಿಯೊಂದನ್ನು ಹಂಚಿಕೊಂಡಿದ್ದಾರೆ. ದ್ರೌಪದಿ ಎನ್ನುವುದು ತಮ್ಮ ಮೂಲ ಹೆಸರಲ್ಲ, ಅದು ಶಾಲಾ ಶಿಕ್ಷಕರಿಂದ ಕೊಡಲ್ಪಟ್ಟಿದ್ದು ಎಂದು ಅವರು ಬಹಿರಂಗ ಪಡಿಸಿದ್ದಾರೆ.

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದ ವೇಳೆ ತಮ್ಮ ಮೂಲ ಸಂತಾಲಿ ಹೆಸರು ದ್ರೌಪದಿ ಎಂದಾಗಿರಲಿಲ್ಲ. ಮೊದಲ ಹೆಸರು ʼಪುತಿʼ ಎಂದಾಗಿತ್ತು. ಆದರೆ ಸದುದ್ದೇಶದಿಂದ ನನ್ನ ಶಾಲಾ ಶಿಕ್ಷಕರು ಅದನ್ನು ದ್ರೌಪದಿ ಎಂದು ಬದಲು ಮಾಡಿದರು ಎಂದು ಹೇಳಿಕೊಂಡಿದ್ದಾರೆ.

ತಮ್ಮ ಜಿಲ್ಲೆ ಮಯೂರ್‌ಭಂಜ್‌ ನ ಶಿಕ್ಷಕರು 1960ರಲ್ಲಿ ಕಟಕ್‌ ನಿಂದ ಪ್ರಯಾಣಿಸಿತ್ತಿದ್ದರು. ಅವರಿಗೆ ನನ್ನ ಹೆಸರು ಅಷ್ಟೊಂದು ಇಷ್ಟವಾಗಲಿಲ್ಲ. ಹಾಗಾಗಿ ಒಳ್ಳೆಯದಾಗಲೆಂದು ದ್ರೌಪದಿ ಎಂದು ಕರೆಯುವಂತೆ ಮಾಡಿದರು ಎಂದು ಹಂಚಿಕೊಂಡಿದ್ದಾರೆ

ಸಂತಾಲಿ ಸಂಸ್ಕೃತಿಯಲ್ಲಿ ಹೆಸರುಗಳು ಸಾಯುವುದಿಲ್ಲ ಒಂದು ಹುಡುಗಿ ಜನಿಸಿದರೆ, ಅವಳು ತನ್ನ ಅಜ್ಜಿಯ ಹೆಸರನ್ನು ಪಡೆದುಕೊಳ್ಳುತ್ತಾಳೆ. ಅದೇ ಒಬ್ಬ ಹುಡುಗ ಜನಿಸಿದರೆ ಆತ ತನ್ನ ಅಜ್ಜನ ಹೆಸರು ಪಡೆದುಕೊಳ್ಳುತ್ತಾನೆ ಎಂಬ ವಿಷಯವನ್ನು ಉಲ್ಲೇಖಿಸಿದ ಅವರು ತಮ್ಮ ಉಪನಾಮವೂ ಕೂಡ ಶಾಲೆಗಳಲ್ಲಿ ʼತುಡುʼ ಎಂದು ದಾಖಲಾಗಿತ್ತು ನಂತರ ಬ್ಯಾಂಕ್ ಅಧಿಕಾರಿ ಶ್ಯಾಮ್ ಚರಣ್ ತುಡು ಅವರನ್ನು ಮದುವೆಯಾದ ನಂತರ ‘ಮುರ್ಮು’ ಎಂಬ ಪದ ಬಳಸಲು ಪ್ರಾರಂಭಿಸಿದೆ ಎಂದು ಹಂಚಿಕೊಂಡಿದ್ದಾರೆ.

ಇಂದು ಮುಂಜಾನೆ ಅವರ ಪ್ರಮಾಣವಚನ ಕಾರ್ಯಕ್ರಮವು ಜರುಗಿದ್ದು ಅದರ ನಂತರದಲ್ಲಿ ಅವರಿಗೆ 21-ಗನ್‌ ಸೆಲ್ಯೂಟ್‌ ಗೌರವ ನೀಡಲಾಯಿತು. ಭಾರತದ ಸಶಸ್ತ್ರಪಡೆಗಳ ಮಹಾದಂಡನಾಯಕರಾದ ಅವರು ನಂತರದಲ್ಲಿ ಮೂರೂ ಸೇನೆಗಳಿಂದ ಗಾರ್ಡ್‌ ಆಫ್‌ ಹಾನರ್‌ ಸ್ವೀಕರಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!