Monday, August 15, 2022

Latest Posts

ಡಿಆರ್ ಡಿಒ ಅಭಿವೃದ್ಧಿ ಪಡಿಸಿದೆ ಹೊಸ ಕ್ಷಿಪಣಿ: ನೌಕಾಪಡೆ ಬತ್ತಳಿಕೆಗೆ ಇನ್ನಷ್ಟು ಬಲ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಭೂ ಮೇಲ್ಮೈಯಿಂದ ಗಾಳಿಯಲ್ಲಿ ಚಿಮ್ಮಿ ದಾಳಿ ಸಡೆಸಬಲ್ಲ ಸರ್ಫೇಸ್‌ ಟು ಏರ್ ಶಾರ್ಟ್‌ ರೇಂಜ್‌ ಕ್ಷಿಪಣಿ VL-SRSAM ಅನ್ನು ಯಶಸ್ವಿಯಾಗಿ ಪರೀಕ್ಷಿಸಲಾಗಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಅಭಿವೃದ್ಧಿಪಡಿಸಿರುವ ಈ ಕ್ಷಿಪಣಿಯು ಭೂಮಿಯಿಂದ ಲಂಬವಾಗಿ ಚಿಮ್ಮಿ ಕಡಿಮೆ ದೂರದ ಗುರಿಯನ್ನು ಯಶಸ್ವಿಯಾಗಿ ತಲುಪಬಲ್ಲದು. ಶುಕ್ರವಾರ ಒಡಿಶಾದ ಕರಾವಳಿಯ ಚಂಡೀಪುರದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ (ITR) ನಲ್ಲಿ ಪರೀಕ್ಷೆ ಮಾಡಲಾಗಿದ್ದು ಪರೀಕ್ಷೆಯು ಯಶಸ್ವಿಯಾಗಿದೆ.

ಏನಿದು ವಿಎಲ್- ಎಸ್‌ಆರ್‌ಎಸ್‌ಎಮ್‌ ?
VL-SRSAM, ಹಡಗಿನ ಆಯುಧ ವ್ಯವಸ್ಥೆಯಾಗಿದ್ದು, ಹತ್ತಿರದ ವ್ಯಾಪ್ತಿಯಲ್ಲಿನ ವಿವಿಧ ವೈಮಾನಿಕ ಬೆದರಿಕೆಗಳನ್ನು ಹಾಗೂ ಸಮುದ್ರ ಮೇಲ್ಮೈಯಲ್ಲಿನ ಗುರಿಗಳನ್ನು ಹೊಡೆದುರುಳಿಸಲು ಸಹಾಯಕವಾಗಿದೆ. ಪ್ರಸ್ತುತ ವೈಮಾನಿಕ ಗುರಿಯೊಂದರ ಮೇಲೆ ಯಶಸ್ವೀ ಪ್ರಯೋಗ ನಡೆಸಲಾಗಿದೆ. ಪರೀಕ್ಷಾ ಉಡಾವಣೆಯನ್ನು DRDO ಮತ್ತು ಭಾರತೀಯ ನೌಕಾಪಡೆಯ ಹಿರಿಯ ಅಧಿಕಾರಿಗಳು ಮೇಲ್ವಿಚಾರಣೆ ಮಾಡಿದರು.

ಈ DRDO, ಭಾರತೀಯ ನೌಕಾಪಡೆಯ ಈ ಸಾಧನೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಭಿನಂದಿಸಿದ್ದಾರೆ ” ವೈಮಾನಿಕ ಬೆದರಿಕೆಗಳ ವಿರುದ್ಧ ನೌಕಾ ಹಡಗುಗಳಿಗೆ ಈ ಕ್ಷಿಪಣಿ ಸಹಾಯಕವಾಗಿದ್ದು ಈ ಯಶಸ್ಸು ಭಾರತೀಯರ ರಕ್ಷಣಾ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸುತ್ತದೆ” ಎಂದು ಟ್ವೀಟ್‌ ಮಾಡಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss