ಗುಟ್ಕಾ ತಿನ್ನಿ, ಮದ್ಯ ಸೇವಿಸಿ: ಮಾತಿನ ಭರದಲ್ಲಿ ಬಿಜೆಪಿ ಎಂಪಿ ಯಡವಟ್ಟು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಿಜೆಪಿ ಸಂಸದ ಜನಾರ್ದನ್ ಮಿಶ್ರಾ ಮತ್ತೊಮ್ಮೆ ಮಾತನಾಡುವ ಭರದಲ್ಲಿ ಮದ್ಯ ಸೇವಿಸಿ, ಗುಟ್ಕಾ ತಿನ್ನುವಂತೆ ಕರೆ ನೀಡಿ ಯಡವಟ್ಟು ಮಾಡಿಕೊಂಡಿದ್ದಾರೆ. ಮಧ್ಯಪ್ರದೇಶದ ರೇವಾದಲ್ಲಿರುವ ಕೃಷ್ಣರಾಜ್ ಕಪೂರ್ ಆಡಿಟೋರಿಯಂನಲ್ಲಿ ಜಲ ಸಂರಕ್ಷಣೆಯ ಕಾರ್ಯಾಗಾರದಲ್ಲಿ ಭಾಗವಹಿಸಿದ ಸಂಸದ ಮಿಶ್ರಾ ನೀರನ್ನು ಸಮರ್ಥವಾಗಿ ಬಳಸುವುದು ಹೇಗೆ? ಎಂಬ ಬಗ್ಗೆ ಮಾತನಾಡುತ್ತಾ ಮದ್ಯ ಸೇವಿಸಿ, ಗುಟ್ಕಾ ಜಗಿಯಿರಿ ಇದರ ಜೊತೆಗೆ ನೀರನ್ನು ಸಂರಕ್ಷಿಸಿ ಎಂದರು. ನೀರಿನ ಸಂರಕ್ಷಣೆಗೂ ಮದ್ಯಪಾನ, ಗುಟ್ಕಾ ಸೇದುವುದಕ್ಕೂ ಏನು ಸಂಬಂಧ ಎಂದು ಜನರಿಗೆ ಅರ್ಥವಾಗುತ್ತಿಲ್ಲ. ಸಂಸದರು ಯಾವ ಉದ್ದೇಶದಿಂದ ಈ ಕಾಮೆಂಟ್‌ಗಳನ್ನು ಮಾಡಿದ್ದಾರೆ ಯಾರಿಗೂ ಅರ್ಥವಾಗಿಲ್ಲ.

ನೀರಿಲ್ಲದೆ ಭೂಮು ಒಣಗುತ್ತಿವೆ, ಭೂತಾಯಿಗಾಗಿ ನೀರಿನ ಸಂರಕ್ಷಣೆ ಅತ್ಯಗತ್ಯ ಎಂದರು. ಇಲ್ಲಿವರೆಗೂ ಸರಿ ಆದರೆ ಮುಂದುವರೆದು  ಗುಟ್ಕಾ ಜಗಿಯಿರಿ, ಮದ್ಯ ಸೇವಿಸಿ, ಎಂದು ಹೇಳಿದ ಕೂಡಲೇ ಅಲ್ಲಿದ್ದವರೆಲ್ಲ ಬೆಚ್ಚಿಬಿದ್ದರು. ಅಲ್ಲಿಗೆ ನಿಲ್ಲದೆ, ಸುಲೇಸನ್ (ಒಂದು ರೀತಿಯ ಅಂಟು ತರಹದ ವಸ್ತು) ಅಥವಾ ಅಯೋಡೆಕ್ಸ್ ಅನ್ನು ಸೇವಿಸಿ ಆದರೆ ನೀರಿನ ಮಹತ್ವವನ್ನು ಅರ್ಥ ಮಾಡಿಕೊಳ್ಳಿ ಎಂದರು. ಈ ಕಾಮೆಂಟ್‌ಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಯಾವುದೇ ಸರ್ಕಾರ ನೀರಿನ ತೆರಿಗೆಯನ್ನು ಮನ್ನಾ ಮಾಡುವುದಾಗಿ ಹೇಳಿದರೆ, ನೀರಿನ ತೆರಿಗೆ ಬೇಕಾದ್ರೆ ಪಾವತಿ ಮಾಡುತ್ತೇವೆ. ಆದರೆ ವಿದ್ಯುತ್ ಬಿಲ್ ಸೇರಿದಂತೆ ಇತರ ತೆರಿಗೆಗಳನ್ನು ಮನ್ನಾ ಮಾಡುವಂತೆ ಒತ್ತಾಯಿಸಿ ಎಂದರು. ಸಂಸದ ಮಿಶ್ರಾ ಈ ರೀತಿಯ ವಿಚಿತ್ರ ಕಾಮೆಂಟ್‌ಗಳನ್ನು ಮಾಡಿ ಸುದ್ದಿಯಾಗುತ್ತಿರುವುದು ಇದೇ ಮೊದಲೇನಲ್ಲ. ಇತ್ತೀಚೆಗಷ್ಟೇ ಈತ ತನ್ನ ಬರೀ ಕೈಯಿಂದಲೇ ಶೌಚಾಲಯವನ್ನು ಸ್ವಚ್ಛಗೊಳಿಸುತ್ತಿರುವ ವಿಡಿಯೋ ವೈರಲ್ ಆಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!