Sunday, April 18, 2021

Latest Posts

ಬೆಳಗ್ಗೆ ಖಾಲಿ ಬಿಸಿ ನೀರು ಸೇವಿಸುತ್ತೀರಾ? ಇನ್ಮುಂದೆ ನೀರಿಗೆ ಏಲಕ್ಕಿ ಬೆರೆಸಿಕೊಂಡು ಕುಡಿಯಿರಿ… ಯಾಕೆ ಗೊತ್ತಾ?

ತುಂಬಾ ಜನರಿಗೆ ಬೆಳಗ್ಗೆ ಎದ್ದ ತಕ್ಷಣ ಬಿಸಿ ನೀರು ಕುಡಿಯುವ ಅಭ್ಯಾಸವಿರುತ್ತದೆ. ಖಾಲಿ ಬಿಸಿ ನೀರು ಕುಡಿಯುವ ಬದಲು ನೀರಿಗೆ ಚಿಟಿಕೆ ಏಲಕ್ಕಿ ಪುಡಿ ಹಾಕಿಕೊಂಡು ಕುಡಿಯಿರಿ. ಇದರಿಂದ ಆರೋಗ್ಯ ಇನ್ನಷ್ಟು ವೃದ್ಧಿಯಾಗುತ್ತದೆ.

ಜೀರ್ಣಕ್ರಿಯೆ:
ಬಿಸಿ ನೀರಿಗೆ ಚಿಟಿಕೆ  ಏಲಕ್ಕಿ ಹಾಕಿಕೊಂಡು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಜೀರ್ಣಕ್ರೀಯೆ ಸರಿಯಾಗುತ್ತದೆ.

ಅಜೀರ್ಣ:
ಅಜೀರ್ಣದ ಸಮಸ್ಯೆ ಇರುವವರು ಬಿಸಿ ನೀರಿಗೆ ಚಿಟಿಕೆ ಏಲಕ್ಕಿ ಮತ್ತು ಚಿಟಿಕೆ ಉಪ್ಪು ಹಾಕಿಕೊಂಡು ಸೇವಿಸಿದರೆ ಅಜೀರ್ಣ ಸಮಸ್ಯೆ ನಿವಾರಣೆಯಾಗುತ್ತದೆ.

ಬಾಯಿ ದುರ್ವಾಸನೆ:
ಬಾಯಿ ದುರ್ವಾಸನೆ ಸಮಸ್ಯೆ ಇರುವವರು ದಿನವೂ ಏಲಕ್ಕಿ ಬೆರೆಸಿದ ನೀರನ್ನು ಸೇವಿಸಿ. ದುರ್ವಾಸನೆ ನಿವಾರಣೆಯಾಗುತ್ತದೆ.

ಶೀತ:
ಬಹಳ ತಂಪಿನ ದೇಹದವರಿಗೆ ಆಗಾಗ ಶೀತ ಆಗುತ್ತಿರುತ್ತದೆ. ಏಲಕ್ಕಿ ನೀರನ್ನು ನಿತ್ಯ ಸೇವಿಸಿದರೆ ದೇಹವನ್ನು ಉಷ್ಣಾಂಶದಲ್ಲಿ ಇಡುತ್ತದೆ. ಶೀತ ಕಡಿಮೆ ಆಗುತ್ತದೆ.

ಯೌವನ:
ಏಲಕ್ಕಿಯಲ್ಲಿ ಆಂಟಿ ಆಕ್ಸಿಡೆಂಟ್ ಗುಣ ಹೆಚ್ಚಿರುವುದರಿಂದ ಏಲಕ್ಕಿಯು ನಮ್ಮ ದೇಹಕ್ಕೆ ವಯಸ್ಸಾಗದಂತೆ ತಡೆಯುತ್ತದೆ. ಇದರ ನೀರನ್ನು ಸೇವಿಸಿದರೆ ಯಾವಾಗಲೂ ಯಂಗ್ ಇರಬಹುದು.

ವಾಂತಿ:
ಬೆಳಗ್ಗೆ ಎದ್ದ ತಕ್ಷಣ ವಾಂತಿ ಬಂದಂತಾಗುವ ಸಮಸ್ಯೆ ಇದ್ದರೆ ಏಲಕ್ಕಿ ನೀರು ಸೇವನೆಯಿಂದ ಈ ಸಮಸ್ಯೆ ನಿವಾರಣೆಯಾಗುತ್ತದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss