Thursday, August 11, 2022

Latest Posts

ನಿತ್ಯ ಒಂದು ಗುಟುಕು ಎಳನೀರು ಸೇವಿಸಿ, ಈ 12 ಆರೋಗ್ಯಕರ ಲಾಭ ಪಡೆಯಿರಿ…

ಎಳನೀರು ಪ್ರಕೃತಿ ದತ್ತವಾಗಿ ನಮಗೆ ಸಿಗುವ ಅಮೃತ. ಯಾವುದೇ ಅಡ್ಡ ಪರಿಣಾಮವಿಲ್ಲದೆ ನಮ್ಮ ದೇಹದ ಆರೋಗ್ಯವನ್ನು ಕಾಪಾಡುವ ಎಳನೀರಿನ ಪಾತ್ರ ದೊಡ್ಡದು. ಹೊರಗಡೆ ಹೋದಾಗ ಜಂಗ್ ಫುಡ್ ತಿನ್ನುವ ಬದಲು ವಾರಕ್ಕೆ ಒಮ್ಮೆ ಎಳನೀರು ಕುಡಿಯಿರಿ.  ಎಳನೀರು ಸೇವಿಸುವುದರಿಂದ ಆಗುವ ಲಾಭಗಳು ಯಾವವು ಗೊತ್ತಾ? ಇಲ್ಲಿದೆ ನೋಡಿ..

ರಕ್ತದೊತ್ತಡ:
ಪ್ರತಿದಿನ ಎಳನೀರು ಕುಡಿಯುವುದರಿಂದ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಡುತ್ತದೆ.
ಎಳನೀರು ರಕ್ತ ಪರಿಚಲನೆಯನ್ನು ಹೆಚ್ಚಿಸುವುದರಿಂದಾಗಿ ಅಧಿಕ ರಕ್ತದೊತ್ತಡದ ಪ್ರಮಾಣವನ್ನು ತಗ್ಗಿಸುತ್ತದೆ.

ಪ್ರತಿರೋಧಕ ಶಕ್ತಿ:
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಎಳನೀರು ಕುಡಿಯುವುದರಿಂದ ಬಹಳ ಲಾಭವಾಗಳಿದೆ. ಎಳನೀರಿನಲ್ಲಿ ಲೌರಿಕ್ ಆಮ್ಲವಿದ್ದು ಇದು ದೇಹದಲ್ಲಿ ಪ್ರತಿರೋಧಕ ಶಕ್ತಿ ಹೆಚ್ಚಿಸುವುದು, ಚಯಾಪಚಯ ಕ್ರಿಯೆ ವೃದ್ಧಿಸುತ್ತದೆ.

ಹೃದಯಾಘಾತ:
ಎಳನೀರು ಕುಡಿಯುದರಿಂದ ಹೃದಯಾಘಾತ ಹಾಗೂ ಇತರೆ ಹೃದಯ ರಕ್ತನಾಳದ ಸಮಸ್ಯೆ ಬರುವ ಅಪಾಯ ಕಡಿಮೆಯಾಗುತ್ತದೆ. ಮತ್ತು ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಣದಲ್ಲಿಡುತ್ತದೆ.

ನಿಶ್ಯಕ್ತಿ:
ಎಳನೀರು ಕುಡಿಯುವುದರಿಂದ ನಿಶ್ಯಕ್ತಿ ಹೋಗಲಾಡಿಸಬಹುದು ಮತ್ತು ಶಕ್ತಿ ಮರಳಿ ಪಡೆಯಬಹುದು.

ತೂಕ ಇಳಿಕೆ:
ತೂಕ ಇಳಿಸುವ ಬಗ್ಗೆ ಯೋಚಿಸುವವರು ಎಳನೀರು ಸೇವಿಸುವುದನ್ನು ರೂಢಿಸಿಕೊಳ್ಳಿ. ಎಳನೀರಿನಲ್ಲಿ ಕೊಬ್ಬಿನ ಅಂಶ ಕಡಿಮೆ ಇದೆ. ಅಲ್ಲದೆ ಎಳನೀರು ಸೇವಿಸುವುದರಿಂದ ಹೊಟ್ಟೆ ತುಂಬಿಕೊಂಡು ಹಸಿವನ್ನು ಕಡಿಮೆ ಮಾಡುತ್ತದೆ.

ಒತ್ತಡ ನಿವಾರಣೆ:
ಒತ್ತಡ ನಿವಾರಣೆ ಮಾಡಲು ಮತ್ತು ಮನಸ್ಸನ್ನು ಶಾಂತವಾಗಿರಿಸಲು ನೀವು ಮಲಗುವ ಮೊದಲು ಒಂದು ಎಳನೀರು ಕುಡಿಯಿರಿ. ಮಲಗುವ ಮೊದಲು ನೀವು ಎಳನೀರು ಕುಡಿದರೆ ದೇಹದಲ್ಲಿ ಇರುವ ಎಲ್ಲಾ ವಿಷಕಾರಿ ಅಂಶವನ್ನು ಹೊರಹಾಕಲು ಇದು ನೆರವಾಗುತ್ತದೆ.

ರೋಗ ನಿರೋಧಕ ಶಕ್ತಿ:
ಎಳನೀರಲ್ಲಿ ಸಾಕಷ್ಟು ಪೌಷ್ಠಿಕಾಂಶಗಳು ಹಾಗೂ ವಿಟಮಿನ್‌ಗಳಿವೆ. ಅಲ್ಲದೆ, ಎಳನೀರಿನಲ್ಲಿ ವೈರಸ್‌, ಬ್ಯಾಕ್ಟೀರಿಯಾವನ್ನು ತಡೆಗಟ್ಟುವ ಗುಣಗಳಿದ್ದು, ಎಳನೀರು ಸೇವಿಸುವುದರಿಂದ ನಿಮ್ಮ ದೇಹಕ್ಕೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ತಂಪು:
ಬೇಸಿಗೆಯಲ್ಲಿ ದೇಹಕ್ಕೆ ಹೆಚ್ಚು ನೀರಿನಂಶ ಬೇಕಾಗುತ್ತದೆ. ಬಿಸಿಲಿನಿಂದ ದೇಹದ ಉಷ್ಣತೆ ಹೆಚ್ಚಾಗುತ್ತದೆ. ಆಗ ಎಳನೀರನ್ನು ಸೇವಿಸಬೇಕು. ಇದ  ದೇಹವನ್ನು ತಂಪಾಗಿಡುತ್ತದೆ. ಅಲ್ಲದೆ ಇದು ನಮ್ಮ ದೇಹಕ್ಕೆ ಬೇಕಿರುವ ನೀರಿನಂಶವನ್ನು ತುಂಬಿ ಕೊಡುತ್ತದೆ.

ಗರ್ಭಿಣಿ:
ಎಳನೀರು ಗರ್ಭಿಣಿಯರಿಗೂ ಒಳ್ಳೆಯದು. ಗರ್ಭಿಣಿಯರಿಗೂ ಎಳನೀರು ಕುಡಿಯಲು ವೈದ್ಯರು ಸಾಮಾನ್ಯವಾಗಿ ಹೇಳುತ್ತಾರೆ . ಏಕೆಂದರೆ, ಮಲಬದ್ಧತೆ, ಎದೆಯುರಿ ಮತ್ತು ನಿಧಾನ ಜೀರ್ಣಕ್ರಿಯೆಯ ವಿರುದ್ಧ ಹೋರಾಡಲು ಇದು ಸಹಾಯ ಮಾಡುತ್ತದೆ.

ಮೂತ್ರಪಿಂಡ:
ಎಳನೀರು ಮೂತ್ರಪಿಂಡದ ಕಾರ್ಯನಿರ್ವಹಣೆ ಹೆಚ್ಚಿಸುತ್ತದೆ. ಎಳನೀರಿನಲ್ಲಿರುವ ಮಿನರಲ್, ಪೊಟ್ಯಾಷಿಯಂ ಹಾಗೂ ಮೆಗ್ನೀಶಿಯಂ ಅಂಶಗಳಿಂದ ಯಾವುದೇ ಮೂತ್ರಪಿಂಡದ ರೋಗಗಳಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಇದು ಒಳ್ಳೆಯದು. ಅಲ್ಲದೆ, ಇದು ಮೂತ್ರವರ್ಧಕವಾಗಿದ್ದು, ಮೂತ್ರದ ಹರಿವು ಮತ್ತು ಉತ್ಪಾದನೆಯನ್ನು ಹೆಚ್ಚಿಸುತ್ತದೆ ಹಾಗೂ ಮೂತ್ರಕೋಶವನ್ನು ಶುದ್ಧೀಕರಿಸುತ್ತದೆ.

ಉರಿ ಮೂತ್ರ:
ಉರಿಮೂತ್ರ ಇರುವವರು ಪ್ರತಿದಿನ ಎಳನೀರು ಸೇವಿಸುವುದರಿಂದ ಉರಿಮೂತ್ರ ಸಮಸ್ಯೆ ದೂರವಾಗುತ್ತದೆ. ಕಣ್ಣು ಉರಿ ಹಾಗೂ ಬಿಸಿ ಅನುಭವವನ್ನು ತಗ್ಗಿಸುತ್ತದೆ.

ಚರ್ಮ:
ಎಳನೀರು ಸೇವನೆಯಿಂದ ಚರ್ಮಕ್ಕೂ ಪ್ರಯೋಜನ. ನಿಮಗೆ ಮೊಡವೆ, ಗುಳ್ಳೆಯ ಸಮಸ್ಯೆಗಳಿದ್ದರೆ ಅಥವಾ ತಾರುಣ್ಯವನ್ನು ಉಳಿಸಿಕೊಳ್ಳಬೇಕೆಂದರೆ ಎಳನೀರನ್ನು ನಿಮ್ಮ ಮುಖಕ್ಕೆ ಹಚ್ಚಿಕೊಂಡು ಇಡೀ ರಾತ್ರಿ ಹಾಗೇ ಬಿಟ್ಟು ಬೆಳ್ಳಿಗ್ಗೆ ಮುಖ ತೊಳೆಯುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss