ಉರಿ ಮೂತ್ರ ಸಮಸ್ಯೆ ಬೇಸಿಗೆಯಲ್ಲಿ ಉಲ್ಬಣವಾಗುತ್ತದೆ. ಉರಿ ಮೂತ್ರದ ಸಮಸ್ಯೆ ಇರುವವರು ಕ್ಯಾರೆಟ್ ಜ್ಯೂಸ್ ಸೇವಿಸಿ. ಕ್ಯಾರೆಟ್ ಜ್ಯೂಸ್ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದನ್ನು ಹೆಚ್ಚೆಚ್ಚು ಸೇವಿಸಿದಷ್ಟು ರಕ್ತ ಹೆಚ್ಚುತ್ತದೆ. ಬೇಸಿಗೆಯಲ್ಲಿ ಕ್ಯಾರೆಸ್ ಜ್ಯೂಸ್ ಕುಡಿದರೆ ದೇಹ ತಂಪಾಗಿರುತ್ತದೆ. ಮತ್ತು ಈ ಜ್ಯೂಸ್ ಬಹಳ ಸರಳವಾಗಿ ಕೂಡ ಮಾಡಬಹುದು..
ಬೇಕಾಗುವ ಸಾಮಗ್ರಿ:
ಕ್ಯಾರೆಟ್
ಸಕ್ಕರೆ
ಹಾಲು
ಮಾಡುವ ವಿಧಾನ:
ಮೊದಲಿಗೆ ಒಂದು ಕ್ಯಾರೆಟ್ ತೆಗೆದುಕೊಳ್ಳಿ. ಅದನ್ನು ಹೆಚ್ಚಿಕೊಂಡು ನೀರಿನಲ್ಲಿ ಬೇಯಿಸಿಕೊಳ್ಳಿ.
ಬೇಯಿಸಿಕೊಂಡ ಕ್ಯಾರೆಟ್ ನ್ನು ಸಕ್ಕರೆ ಮತ್ತು ಹಾಲು ಹಾಕಿ ಮಿಕ್ಸಿಯಲ್ಲಿ ರುಬ್ಬಿಕೊಂಡು ಕುಡಿಯಿರಿ. ಹೀಗೆ ಮಾಡಿದರೆ ಕ್ಯರೆಟ್ ಜ್ಯೂಸ್ ರೆಡಿ. ಇದನ್ನು ಕೋಲ್ಡ್ ಮಾಡಿಕೊಂಡು ಸಹ ಕುಡಿಯಬಹುದು.