Thursday, June 30, 2022

Latest Posts

ಬಿಸಿಲು ಅಂಥ ಹೆಚ್ಚು ಮಿಲ್ಕ್ ಶೇಕ್ ಕುಡಿತೀರಾ? ಇನ್ಮುಂದೆ ಆರೋಗ್ಯಕರ ಮಸಾಲ ಕಲ್ಲಂಗಡಿ ಜ್ಯೂಸ್ ಕುಡಿಯಿರಿ…

ಈಗಂತೂ ತುಂಬಾನೇ ಬಿಸಿಲು. ಯಾವಾಗಲೂ ಏನಾದರೂ ಒಂದು ಜ್ಯೂಸ್ ಅಥವಾ ನೀರು ಕುಡಿಯೋಣ ಎನಿಸುತ್ತಾ ಇರುತ್ತದೆ. ಆದರೆ ಜ್ಯೂಸ್ ಎಂದು ಪ್ರತಿಬಾರಿ ಸಕ್ಕರೆ ಹಾಕಿದ್ದು ಕುಡಿಯುತ್ತಿದ್ದರೆ ಆರೋಗ್ಯಕ್ಕೆ ಹಾನಿ ಖಚಿತ. ಅದೇ ಈ ಕಲ್ಲಂಗಡಿ ಹಣ್ಣಿನ ಮಸಾಲ ಜ್ಯೂಸ್ ಸೇವಿಸಿ..

ಬೇಕಾಗುವ ಸಾಮಗ್ರಿ:

ಕಲ್ಲಂಗಡಿ
ಸಕ್ಕರೆ
ಪುದೀನಾ
ಶುಂಠಿ
ಉಪ್ಪು
ಲಿಂಬು

ಮಾಡುವ ವಿಧಾನ:

  • ಅರ್ಧ ಹೋಳು ಕಲ್ಲಂಗಡಿ ಹಣ್ಣನ್ನು ಸಣ್ಣದಾಗಿ ಕಟ್ ಮಾಡಿಕೊಳ್ಳಿ.
  • ಇದಕ್ಕೆ ತಕ್ಕಷ್ಟು ಸಕ್ಕರೆ, ಚಿಟಿಕೆ ಉಪ್ಪು ಹಾಕಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ ಕೊಂಡು ಸೋಸಿ ಇಟ್ಟು ಕೊಳ್ಳಬೇಕು.
  • ನಂತರ ಸ್ವಲ್ಪ ಪುದೀನಾ, ಸ್ವಲ್ಪ ಶುಂಠಿ ಎರಡನ್ನು ಸೇರಿಸಿ ತರಿ ತರಿಯಾಗಿ ಕುಟ್ಟಿ ಲೋಟಕ್ಕೆ ಹಾಕಿ ಅರ್ಧ ಚಮಚ ಲಿಂಬೆ ರಸ ಎರಡು ಐಸ್ ಕ್ಯೂಬ್ ಹಾಕಿ ಇದಕ್ಕೆ ರುಬ್ಬಿದ ಕಲ್ಲಂಗಡಿ ಜ್ಯೂಸ್ ಹಾಕಿದರೆ ಮಸಾಲ ಕಲ್ಲಂಗಡಿ ಜ್ಯೂಸ್ ರೆಡಿ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss