ಪ್ರತಿ ದಿನ ಬೆಳಗ್ಗೆ ಎದ್ದ ತಕ್ಷಣ ಬಿಸಿ ನೀರು ಕುಡಿಯುತ್ತೀರ ಆದರೆ ಮಲಗುವಾಗ? ಮಲಗುವಾ ಬಿಸಿ ನೀರು ಕುಡಿಯುವುದಿಲ್ಲ. ಹಾಲನ್ನೇ ಹೆಚ್ಚಾಗಿ ಹಲವರು ಕುಡಿಯುತ್ತಾರೆ. ಅದರಲ್ಲೂ ತುಂಬಾ ಮಂದಿ ರಾತ್ರಿ ಏಳರ ನಂತರ ಹೆಚ್ಚಿಗೆ ನೀರನ್ನೇ ಕುಡಿಯುವುದಿಲ್ಲ. ಸುಮ್ಮನೆ ಕಿಡ್ನಿಗೆ ಹೆಚ್ಚು ಕೆಲಸ ಎನ್ನುತ್ತಾರೆ. ಆದರೆ ರಾತ್ರಿ ಬಿಸಿನೀರು ಕುಡಿಯುವುದು ನಮ್ಮ ಆರೋಗ್ಯಕ್ಕೆ ತುಂಬಾನೇ ಮುಖ್ಯ.. ಖಾಲಿ ಬಿಸಿ ನೀರು ಕುಡಿಯುವ ಬದಲು ಬಿಸಿ ನೀರಿಗೆ ಲಿಂಬು ರಸ ಸೇರಿಸಿಕೊಂಡು ಕುಡಿಯಿರಿ. ಇದು ಆರೋಗ್ಯಕ್ಕೆ ಮತ್ತೂ ಲಾಭ..
ಕಟ್ಟಿದ ಮೂಗು:
ರಾತ್ರಿ ಮಲಗುವ ಮೊದಲು ಬಿಸಿ ನೀರಿಗೆ ಲಿಂಬು ರಸ ಹಾಕಿಕೊಂಡು ಸೇವಿಸುವುದರಿಂದ ಕಟ್ಟಿದ ಮೂಗು, ಕಫ ,ಶೀತ ಏನಿದ್ದರೂ ಬೆಳಗ್ಗೆ ಸರಿಯಾಗುತ್ತದೆ.
ಜೀರ್ಣ:
ರಾತ್ರಿ ಮಲಗುವ ಮೊದಲು ತಿಂದಿರುವ ಆಹಾರ ಜೀರ್ಣವಾಗುತ್ತದೆ. ಗ್ಯಾಸ್ ಆಗುವ ಧಡಿ ಆಹಾರ ಸೇವಿಸಿದ್ದರೆ ಲಿಂಬು ಹಾಕಿದ ಬಿಸಿ ನೀರು ಸೇವಿಸುವುದರಿಂದ ಸರಿಯಾಗಿ ಜೀರ್ಣವಾಗುತ್ತದೆ.
ಮಲಬದ್ಧತೆ:
ಮನಲಬದ್ಧತೆ ಸಮಸ್ಯೆ ಇರುವವರಿಗೆ ಬಿಸಿ ನೀರಿಗೆ ಲಿಂಬು ರಸ ಹಾಕಿಕೊಂಡು ಸೇವಿಸುವ ಔಷಧ ರಾಮ ಬಾಣದಂತೆ ಕೆಲಸ ಮಾಡುತ್ತದೆ. ಮೋಷನ್ ಸರಿಯಾಗಿ ಆಗುತ್ತದೆ.
ಮೆದುಳು:
ಮೆದುಳು ಚುರುಕುಗೊಳ್ಳುತ್ತದೆ. ಆಕ್ಟೀವ್ ಆಗಿ ಇರುತ್ತದೆ.
ಕಿಡ್ನಿ ಸ್ಟೋನ್:
ಕಿಡ್ನಿ ಸ್ಟೋನ್ ಸಮಸ್ಯೆ ಬರಬಾರದೆಂದರೆ ದಿನವೂ ರಾತ್ರಿ ಮಲಗುವ ಮೊದಲು ಎರಡು ಲೋಟ ಬಿಸಿ ನೀರಿಗೆ 3 ಚಮಚ ಲಿಂಬು ರಸ ಹಾಕಿಕೊಂಡು ಸೇವಿಸಬೇಕು.
ನಿದ್ರಾಹೀನತೆ:
ನಿದ್ರಾ ಹೀನತೆ ಸಮಸ್ಯೆ ನಿವಾರಣೆಯಾಗುತ್ತದೆ. ರಾತ್ರಿ ಚೆನ್ನಾಗಿ ನಿದ್ರೆ ಬರುತ್ತದೆ.
ಚಳಿ:
ಸಣ್ಣ ಚಳಿಗೂ ನಡುಗುವ ಸಮಸ್ಯೆ ಇದ್ದರೆ ಪ್ರತಿದಿನ ಬಿಸಿ ನೀರಿಗೆ ಲಿಂಬು ಹಾಕಿಕೊಂಡು ಕುಡಿದು ಮಲಗಿ. ಚಳಿಯಿಂದ ರಕ್ಷಿಸುತ್ತದೆ.
ಪಿತ್ತ:
ಮುಳ್ಳನ್ನು ಮುಳ್ಳಿನಿಂದಲೆ ತೆಗೆಯಿರಿ ಎಂಬಂತೆ ರಾತ್ರಿ ಬಿಸಿ ನೀರಿಗೆ ಲಿಂಬು ರಸ ಹಾಕಿಕೊಂಡು ಕುಡಿದರೆ ಪಿತ್ತ ನಿವಾರಣೆಯಾಗುತ್ತದೆ.