ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, May 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಬೆಳಗ್ಗೆ ಖಾಲಿ ಬಿಸಿ ನೀರು ಸೇವಿಸುವ ಬದಲು ಚಿಟಿಕೆ ಉಪ್ಪು ಬೆರೆಸಿಕೊಂಡು ಕುಡಿಯಿರಿ… ಏಕೆ ಗೊತ್ತಾ?

ತುಂಬಾ ಜನ ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರನ್ನು ಕುಡಿಯುತ್ತಾರೆ. ಆದರೆ ಉಗುರು ಬೆಚ್ಚಗಿನ ಉಪ್ಪುನೀರನ್ನು ಕುಡಿದಿರುವುದಿಲ್ಲ. ನೀರನ್ನು ಹಾಗೆ ಕುಡಿಯುವುದಕ್ಕಿಂದ ಉಗುರು ಬೆಚ್ಚಗಿನ ನೀರಿಗೆ ಉಪ್ಪು ಬೆರೆಸಿಕೊಂಡು ಕುಡಿದರೆ ಲಾಭ ಹೆಚ್ಚಿದೆ. ದೇಹದಲ್ಲಿನ ಕೆಟ್ಟ ಅಂಶವನ್ನು ಬೆವರಿನ ಮೂಲಕ ಹೊರಹಾಕಲು ಉಪ್ಪುನೀರು ಸೇವನೆ ಬಹಳ ಒಳ್ಳೆಯದು. ನಿತ್ಯ ಉಗುರು ಬೆಚ್ಚಗಿನ ನೀರಿಗೆ ಚಿಟಿಕೆ ಉಪ್ಪು ಸೇರಿಸಿಕೊಂಡು ಕುಡಿಯಿರಿ.. ಇದರಿಂದ ಏನೆಲ್ಲ ಲಾಭವಿದೆ ನೋಡಿ…

ಮೂಳೆ ಗಟ್ಟಿ:
ಉಪ್ಪಿನ ನೀರು ಹಲವಾರು ಬಗೆಯ ಖನಿಜಾಂಶಗಳನ್ನು ಹೊಂದಿದ್ದು, ಮೂಳೆಗಳ ಆರೋಗ್ಯಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮೂಳೆಗಳನ್ನು ಗಟ್ಟಿಗೊಳಿಸುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಎರಡು ಕಪ್ ಉಗುರು ಬೆಚ್ಚಗಿನ ಉಪ್ಪು ನೀರು ಸೇವಿಸಿ.

ಮಲಬದ್ಧತೆ:
ಮಲಬದ್ಧತೆ ಸಮಸ್ಯೆ ಇರುವವರು ದಿನವೂ ಎದ್ದ ತಕ್ಷಣ ಉಗುರು ಬೆಚ್ಚಗಿನ ಉಪ್ಪುನೀರನ್ನು ಕುಡಿದರೆ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ.

ಹಲ್ಲಿನ ಆರೋಗ್ಯ:
ಹಲ್ಲಿನ ಹುಳುಕು, ಹಲ್ಲು ನೋವು, ವಸಡಿನಲ್ಲಿ ರಕ್ತ ಸೋರುವಿಕೆ ಇಂಥ ಹಲ್ಲಿನ ಸಮಸ್ಯೆಗಳು ಬೆಳಿಗ್ಗೆ ಉಪ್ಪು ನೀರನ್ನು ಸೇವಿಸುವುದರಿಂದ ಕಡಿಮೆ ಆಗುತ್ತದೆ. ವಸಡುಗಳು ಗಟ್ಟಿಯಾಗುತ್ತವೆ.

ಕೊಬ್ಬು:
ಬೆಳ್ಳಂಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಉಪ್ಪು ನೀರನ್ನು ಸೇವಿಸಿದರೆ ದೇಹದಲ್ಲಿರುವ ಕೆಟ್ಟ ಖನಿಜಗಳು ಕೆಟ್ಟ ಅಂಶಗಳು ನಾಶವಾಗುತ್ತದೆ. ಕೊಬ್ಬಿನ ಅಂಶ ಬೆವರಿನ ಮೂಲಕ ಹೊರ ಹೋಗುತ್ತದೆ

ಜಂತು ಹುಳ:
ಜಂತು ಹುಳದ ಸಮಸ್ಯೆ ಇರುವವರು ಉಪ್ಪು ನೀರನ್ನು ಸೇವಿಸುವುದರಿಂದ ಜಂತು ಹುಳ ನಿವಾರಣೆಯಾಗುತ್ತದೆ. ಆದರೆ ಇದನ್ನು ಚಿಕ್ಕ ಮಕ್ಕಳಿಗೆ ಕೊಡುವಂತಿಲ್ಲ.

ಗಂಟಲು ನೋವು:
ಗಂಟಲು ನೋವು, ಥೈರಾಯ್ಡ್ ಸಮಸ್ಯೆ ಇರುವವರು ನಿತ್ಯ ಬರಚ್ಚಗಿನ ಉಪ್ಪು ನೀರನ್ನು ಸೇವಿಸಿದರೆ ಗಂಟಲು ಸಮಸ್ಯೆ ನಿವಾರಣೆಯಾಗುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss