spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, December 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಇನ್ಮುಂದೆ ಪ್ರತಿ ದಿನ ನೆನೆಸಿಟ್ಟ ಕೊತ್ತಂಬರಿ ಬೀಜದ ನೀರು ಸೇವಿಸಿ.. ಯಾಕೆ ಗೊತ್ತಾ?

- Advertisement -Nitte

ಪ್ರತಿಯೊಬ್ಬರ ಅಡುಗೆ ಮನೆಯಲ್ಲಿಯೂ ಸ್ಥಾನ ಪಡೆದಿರುವ ಕುತ್ತುಂಬರಿ ಬೀಜದ ಆರೋಗ್ಯಕರ ಲಾಭಗಗಳ ಬಗ್ಗೆ ತುಂಬಾ ಜನರಿಗೆ ಗೊತ್ತಿಲ್ಲ. ಅದೊಂದು ಸಾಂಬಾರು ಪದಾರ್ಥ ಎಂದು ಪರಿಗಣಿಸುತ್ತಾರೆ ಅಷ್ಟೆ. ಆದರೆ ಕುತ್ತಂಬರಿ ಕಾಳು ತನ್ನಲ್ಲಿನ ಹೆಚ್ಚಿನ ಆರೋಗ್ಯಕ್ಕೆ ಸಹಕಾರಿಯಾಗಿರುವ ಗುಣ ಲಕ್ಷಣಗಳಿಂದ ಮನುಷ್ಯರ ದೇಹದ ಆರೋಗ್ಯಕ್ಕೆ ಫಲ ಪ್ರದಾಯಕವೆಂದು ತಿಳಿದು ಬಂದಿದೆ. ಕುತ್ತಂಬರಿ ಕಾಳನ್ನು ಹಾಗೇ ಸೇವಿಸುವುದಕ್ಕಿಂತ ನೀರಿನಲ್ಲಿ ನೆನೆಸಿಟ್ಟು ಅದರ ನೀರನ್ನು ಸೇವಿಸಿ.. ಇದರಲ್ಲಿ ಸಾಕಷ್ಟು ಆರೋಗ್ಯಕರ ಲಾಭವಿದೆ.

ದೇಹದ ಉಷ್ಣಾಂಶ:
ದೇಹದ ಉಷ್ಣಾಂಶವನ್ನು ಕಡಿಮೆ ಮಾಡುವ ಶಕ್ತಿ ನೆನೆಸಿಟ್ಟ ಕೊತ್ತಂಬರಿ ಬೀಜದ ನೀರಿಗಿದೆ. ಬಾಡಿ ಹೀಟ್‌ ಆಗಿದೆ ಎನಿಸಿದಾಗ ಈ ನೀರನ್ನು ಮೂರು ಹೊತ್ತು ಅರ್ಧ ಲೀಟರ್‌ನಷ್ಟು ಸೇವಿಸಿ. ತಕ್ಷಣ ಉಷ್ಣಾಂಶದ ಪ್ರಮಾಣ ಕಡಿಮೆ ಆಗುತ್ತದೆ.

ಗ್ಲುಕೋಸ್ ಅಂಶ:
ನೆನೆಸಿಟ್ಟ ಕೊತ್ತಂಬರಿ ಬೀಜದ ನೀರು ದೇಹದ ರಕ್ತದಲ್ಲಿನ ಗ್ಲುಕೋಸ್ ಅಂಶವನ್ನು ಬಹಳ ಉತ್ತಮವಾಗಿ ನಿರ್ವಹಣೆ ಮಾಡುತ್ತವೆ. ಪ್ರತಿ ದಿನ ಇದರ ನೀರನ್ನು ಸೇವಿಸಿದರೆ  ದೇಹದಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಆರೋಗ್ಯಕರ ರೀತಿಯಲ್ಲಿ ಮುಂದುವರೆಸಿಕೊಂಡು ಹೋಗಲು ಸಹಾಯವಾಗುತ್ತದೆ.

ಪೀರಿಯಡ್ಸ್:
ಸಮಯಕ್ಕೆ ಸರಿಯಾಗಿ ಪೀರಿಯಡ್ಸ್‌ ಆಗದವರು ಪ್ರತಿ ದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿಟ್ಟ ಕೊತ್ತಂಬರಿ ಬೀಜದ ನೀರನ್ನು ಕುಡಿಯುತ್ತಾ ಬನ್ನಿ.. ಒಂದು ತಿಂಗಳಲ್ಲಿ ಪರಿಣಾಮ ಗೊತ್ತಾಗುತ್ತದೆ. ಸಮಯಕ್ಕೆ ಸರಿಯಾಗಿ ಪೀರಿಯಡ್ಸ್‌ ಆಗುತ್ತದೆ.

ತಲೆನೋವು:
ನೆನೆಸಿಟ್ಟ ಕೊತ್ತಂಬರಿ ಬೀಜದ ನೀರಿಗೆ ಸರಿಯಾಗಿ ನೆನೆದ ಅಕ್ಕಿ, ಜೀರಿಗೆ ಹಾಕಿ ಗಟ್ಟಿಯಾಗಿ ರುಬ್ಬಿಕೊಂಡು ಅದರ ಮಿಶ್ರವನ್ನು ವೀಳ್ಯದೆಲೆಗೆ ಹಚ್ಚಿಕೊಂಡು ನೆತ್ತಿ ಮೇಲೆ ಇಟ್ಟುಕೊಂಡರೆ ತಲೆನೋವು ಕಡಿಮೆ ಆಗುತ್ತದೆ.

ಕಣ್ಣು ಉರಿ:
ಕಣ್ಣು ಉರಿ, ಕಣ್ಣು ಕೆಂಪಗಾಗುವುದು, ತುರಿಕೆಯಾಗುವುದು ಆಗುತ್ತಿದ್ದರೆ ನೆನೆಸಿಟ್ಟ ಕೊತ್ತಂಬರಿ ಬೀಜದ ನೀರಿನಿಂದ ಆಗಾಗ ಕಣ್ಣನ್ನು ತೊಳೆದುಕೊಳ್ಳಿ. ಕಣ್ಣಿನ ಎಲ್ಲ ರೀತಿ ಸಮಸ್ಯೆಗೂ ಈ ನೀರು ಉಪಯೋಗಕಾರಿ.

ಸಂಧಿವಾತ:
ಕೊತ್ತಂಬರಿ ಬೀಜದಲ್ಲಿ ನಿಯೋಲ್ ಮತ್ತು ಲಿನೊಲಿಕ್ ಆಸಿಡ್ ಎಂಬ ಎರಡು ಅಂಶಗಳಿದ್ದು, ಇವುಗಳು ಆಂಟಿ – ರ್ಯುಮ್ಯಾಟಿಕ್ ಮತ್ತು ಆಂಟಿ ಆರ್ಥ್ರಿಟಿಕ್ ಗುಣ ಲಕ್ಷಣಗಳನ್ನು ಹೊಂದಿವೆ. ಆದ್ದರಿಂದ ಪ್ರತಿ ದಿನಿನ ನೆನೆಸಿಟ್ಟ ಕೊತ್ತಂಬರಿ ಬೀಜದ ನೀರನ್ನು ಸೇವಿಸಿದೆ  ಸಂಧಿವಾತದಿಂದ ಉಂಟಾದ ಅಂಗಾಂಶಗಳ ಊತ ಮತ್ತು ಕೀಲುಗಳ ಉರಿಯೂತವನ್ನು ಉಪಶಮನವಾಗುತ್ತದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss