ಹಾಗಲಕಾಯಿ ಹೆಸರು ಕೇಳಿದರೇನೇ ಎನೋ ಒಂದು ರೀತಿಯ ಕಹಿ ನಾಲಿಗೆ ತುಂಬಾ ಹರಿದಾಡಿದಂತೆ ಅನಿಸುತ್ತದೆ. ಮುಖ ಹಿಂಡುವಂತೆ ಮಾಡುತ್ತದೆ. ತರಕಾರಿ ಅಂಗಡಿಗಳಲ್ಲಿ ನೀವೇ ನೋಡಿರಬಹುದು ಹಾಗಲಕಾಯಿ ಕೊಂಡು ಕೊಳ್ಳುವವರೇ ಕಡಿಮೆ. ಹಾಗಲ ಕಾಯಿಯ ರಸದ ಉಪಯೋಗ ಎಷ್ಟೋ ಜನರಿಗೆ ಗೊತ್ತಿಲ್ಲ. ಹಾಗಲಕಾಯಿ ಹಲವು ರೀತಿಯಲ್ಲಿ ನಮ್ಮ ದೇಹಕ್ಕೆ ಉತ್ತಮವಾಗಿದೆ. ಪ್ರಮುಖವಾಗಿ ಇದರ ನಿಯಮಿತ ಸೇವನೆಯಿಂದ ಯಕೃತ್ ನಲ್ಲಿ ಸಂಗ್ರಹವಾಗಿದ್ದ ವಿಷಕಾರಿ ವಸ್ತುಗಳನ್ನು ಹೊರಹಾಕಲು ಸಾಧ್ಯವಾಗುತ್ತದೆ.
- ರೋಗ ನಿರೋಧಕ ಶಕ್ತಿ:
ಹಾಗಲಕಾಯಿಯಲ್ಲಿರುವ ಆಂಟಿ ಆಕ್ಸಿಡೆಂಟುಗಳು ದೇಹದ ರೋಗ ನಿರೋದಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕಾಯಿಲೆ ಭಾದಿಸುವ ಕ್ರಿಮಿಗಳ ವಿರುದ್ಧ ಹೋರಾಡುತ್ತದೆ. ಹಾಗಾಗಿ ನಿಯಮಿತವಾಗಿ ಹಾಗಲ ಕಾಯಿ ರಸ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
- ಜಂತು ಹುಳು:
ಜಂತು ಹುಳಗಳು ನಿವಾರಣೆಗೆ ಹಾಗಲ ಕಾಯಿ ಜ್ಯೂಸ್ ದಿವ್ಯ ಔಷಧ. ಜಂತು ಹುಳಗಳು ಹೆಚ್ಚಾದರೆ ಹೊಟ್ಟೆ ಕಡಿತ ಬರುತ್ತದೆ. ಇದರಿಂದ ಕಿರಿಕಿರಿ ಉಂಟಾಗಬಹುದು. ಅಂಥ ಸಮಯದಲ್ಲಿ ಹಾಗಲ ಕಾಯಿ ಜ್ಯೂಸ್ ಸೇವಿಸಿದರೆ ಜಂತು ನಿವಾರಣೆಯಾಗುತ್ತದೆ. - ದೇಹದ ತೂಕ ಇಳಿಕೆ:
ಹಾಗಲಕಾಯಿಯಲ್ಲಿ ಮತ್ತೊಂದು ವಿಶೇಷ ಗುಣವಿದೆ. ಫೈಟ್ರೋನ್ಯೂಟ್ರಿಯೆಂಟುಗಳು ಮತ್ತು ವಿವಿಧ ಪೋಷಕಾಂಶಗಳು. ಇದು ದೇಹದ ಕೊಬ್ಬನ್ನು ಕರಗಿಸುವಲ್ಲಿ ಉತ್ತಮ ಕೆಲಸ ಮಾಡುತ್ತದೆ. ಕೊಬ್ಬು ಕರಗಿಸುವವರು ಹಾಗಲ ಕಾಯಿ ರಸ ದಿನನಿತ್ಯ ಸೇವಿಸಿದರೆ ಒಳ್ಳೆಯದು. - ಮದ್ಯಪಾನದಿಂದ ಮುಕ್ತ:
ಕೆಲವೊಮ್ಮೆ ಮದ್ಯಪಾನದಿಂದ ಅಥವಾ ಔಷಧಿಯ ಅಡ್ಡ ಪರಿಣಾಮದಿಂದಾಗಿ ಅಮಲು ಆಗುತ್ತದೆ ಅಂಥ ಸಮಯದಲ್ಲಿ ಲೋಟಗಟ್ಟಲೆ ಹಾಗಲ ಕಾಯಿ ರಸ ಕುಡಿದರೆ ತಕ್ಷಣ ಇಳಿದು ಬಿಡುತ್ತದೆ. - ಮಧುಮೇಹ:
ಸಕ್ಕರೆ ಕಾಯಿಲೆ ಇರುವವರ ರಕ್ತ ಬಹಳ ಸಿಹಿ ಅಂಶವನ್ನು ಹೊಂದಿರುತ್ತದೆ. ಅಂಥವರು ಹಾಗಲ ಕಾಯಿ ರಸ ನಿಯಮಿತವಾಗಿ ಸೇವಿಸಿದರೆ ರಕ್ತದಲ್ಲಿ ಸಿಹಿ ಕಡಿಮೆ ಆಗಿ ಸಕ್ಕರೆ ಕಾಯಿಲೆ ನಿಯಂತ್ರಣದಲ್ಲಿ ಇರುತ್ತದೆ. - ತಲೆ ಸುತ್ತುವುದು:
ಆಗಾಗ ತಲೆಸುತ್ತಿ ಬೀಳುವವರು ಹಾಗಲ ಕಾಯಿ ಎಸ ಸೇವಿಸಬೇಕು. ಇದನ್ನು ಸೇವಿಸುವುದರಿಂದ ತಲೆ ಸುತ್ತು ಕಡಿಮೆ ಆಗುತ್ತದೆ.ದೈಹಿಕ ಚಟುವಟಿಕೆ ಸರಾಗವಾಗಿ ಸಾಗುವಂತೆ ಮಾಡುತ್ತದೆ