spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, September 23, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಗಮನಿಸಿ…. ಇವುಗಳನ್ನು ಸೇವಿಸಿದ ತಕ್ಷಣ ನೀರು ಕುಡಿದರೆ ಕಾಯಿಲೆ ಗ್ಯಾರೆಂಟಿ!

- Advertisement -Nitte

ಹಸಿವನ್ನೂ ಬೇಕಾದರೂ ತಡೆದುಕೊಳ್ಳಬಹುದು. ಆದರೆ ಬಾಯಾರಿಕೆಯನ್ನು ತಡೆದುಕೊಳ್ಳಲು ಆಗುವುದಿಲ್ಲ. ಮನುಷ್ಯನಿಗೆ ನೀರನ್ನು ಕುಡಿಯದೇ ಇರಲು ಸಾಧ್ಯವೇ ಇಲ್ಲ. ನೀರು ಕುಡಿಯುವುದು ಒಳ್ಳೆಯದು ಕೂಡ. ಆದರೆ ನೀವು ಯಾವ ಆಹಾರವನ್ನು ಸೇವಿಸಿದ ತಕ್ಷಣ ನೀರನ್ನು ಕುಡಿಯುತ್ತಿರುವಿರಿ ಎಂಬುದು ಮುಖ್ಯ. ಅಪ್ಪಿತಪ್ಪಿಯೂ ಈ ಆಹಾರಗಳನ್ನು ಸೇವಿಸಿದರೆ ತಕ್ಷಣ ನೀರನ್ನು ಕುಡಿಯಬೇಡಿ.

  • ಗಿಣ್ಣು: ಗಿಣ್ಣು ಸೇವಿಸಿದ ತಕ್ಷಣ ನೀರನ್ನು ಕುಡಿಯಬೇಡಿ. ತಕ್ಷಣ ನೀರನ್ನು ಕುಡಿದರೆ ಬೇಧಿ ಪ್ರಾರಂಭವಾಗುತ್ತದೆ.  ಅರ್ಧ ಗಂಟೆ ಬಿಟ್ಟು ನೀರನ್ನು ಕುಡಿಯಬಹುದು.
  • ಜೇನು ತುಪ್ಪ: ಜೇನು ತುಪ್ಪ ಸೇವಿಸಿದ ತಕ್ಷಣ ನೀರನ್ನು ಅಪ್ಪಿತಪ್ಪಿಯೂ ಕುಡಿಯಬೇಡಿ. ಏಕೆಂದರೆ ವಾಂತಿ, ಬೇಧಿಯಾಗುತ್ತದೆ. ಜೇನುತುಪ್ಪ ಜೀರ್ಣವಾಗಲು ಸಮಯಬೇಕು. ತಕ್ಷಣ ನೀರನ್ನು ಸೇವಿಸಿದರೆ ಬೇಧಿ ಪ್ರಾರಂಭವಾಗುತ್ತದೆ.
  • ಪೇರಲೆ ಹಣ್ಣು: ಪೇರಲೆ ಹಣ್ಣನ್ನು ಸೇವಿಸಿದ ತಕ್ಷಣ ನೀರನ್ನು ಕುಡಿಯುವುದರಿಂದ ಹೊಟ್ಟೆಯಲ್ಲಿ ಗ್ಯಾಸ್ ಉಂಟಾಗುತ್ತದೆ. ಪೇರಲೆ ಬೀಜ ನಮ್ಮ ದೇಹದಲ್ಲಿ ಜೀರ್ಣವಾಗಲು 2 ಗಂಟೆ ಕನಿಷ್ಠ ಸಮಯ ಬೇಕು. ತಕ್ಷಣ ನೀರು ಸೇವಿಸಿದರೆ ಬೀಜಗಳು ಸರಿಯಾಗಿ ಜೀರ್ಣವಾಗದೆ ಹೊಟ್ಟೆನೋವು ಕಾಣಸಿಕೊಳ್ಳುತ್ತದೆ.
  • ಐಸ್ ಕ್ರೀಂ: ಐಸ್ ಕ್ರೀಂ ಸೇರಿದಂತೆ ಕೋಲ್ಡ್ ಪದಾರ್ಥಗಳನ್ನು ತಿಂದ ತಕ್ಷಣ ನೀರು ಕುಡಿಯಬೇಡಿ. ಇದರಿಂದ ಹಲ್ಲುಗಳು ಹಾಳಾಗುತ್ತವೆ.  ಗಂಟಲು ನೋವು ಬರುತ್ತದೆ. ಕೋಲ್ಡ್ ಪದಾರ್ಥ ತಿಂದ  10 ನಿಮಿಷದ ನಂತರ ನೀರನ್ನು ಕುಡಿಯಿರಿ.
  • ಹಣ್ಣುಗಳು: ಬಾಳೆಹಣ್ಣು, ಚಿಕ್ಕುಗಣ್ಣು, ಸೇಬು, ಅನಾನಸ್, ದಾಳಿಂಬೆ, ಪಪ್ಪಾಯ ಹಣ್ಣುಗಳನ್ನು ಸೇವಿಸಿದ ತಕ್ಷಣ ನೀರನ್ನು ಸೇವಿಸಬೇಡಿ. ಇದರಿಂದ ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾಗುತ್ತದೆ. ಮಧುಮೇಹ ಸಮಸ್ಯೆ ಭವಿಷ್ಯದಲ್ಲಿ ತಲೆದೂರುವ ಸಾಧ್ಯತೆ ಇರುತ್ತದೆ.
  • ಚಹಾ, ಕಾಫಿ, ಹಾಲು: ಚಹಾ, ಕಾಫಿ, ಹಾಲು ಸೇವಿಸಿದ ತಕ್ಷಣ ನೀರು ಕುಡಿಯಬೇಡಿ. ತಕ್ಷಣ ನೀರು ಕುಡಿದರೆ ಜೀರ್ಣಾಂಗ ವ್ಯವಸ್ಥೆ ನಿಧಾನವಾಗಿ ಸರಿಯಾಗಿ ಮಲ ವಿಸರ್ಜನೆ ಆಗುವುದಿಲ್ಲ.
  • ಕಡಲೆ ಕಾಳು, ಶೇಂಗಾ, ಬಟಾಣಿ: ಕಡಲೆ ಕಾಳು, ಶೇಂಗಾ, ಬಟಾಣಿ ಸೇವಿಸಿದ ತಕ್ಷಣ ನೀರನ್ನು ಸೇವಿಸಿದರೆ ಹೊಟ್ಟೆನೋವು ಬರುತ್ತದೆ. ಕೆಮ್ಮು ಆಗುವ ಸಾಧ್ಯತೆಯೂ ಇರುತ್ತದೆ. 10 ನಿಮಿಷ ಬಿಟ್ಟು ನೀರನ್ನು ಕುಡಿಯಬೇಕು.
  • ಊಟದ ನಂತರ: ಊಟ ಆದ ತಕ್ಷಣವೂ ನಿರನ್ನು ಕುಡಿಯ ಬಾರದು. ಹೀಗೆ ಕುಡಿದರೆ ಆ್ಯಸಿಡಿಟಿ ಆಗುತ್ತದೆ. ತಿಂದ ಆಹಾರ ಜೀರ್ಣವಾಗುವುದಿಲ್ಲ.

 

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss