ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, August 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕೋಕಾ ಬದಲು ನೀರು ಕುಡಿಯಿರಿ ಎಂದ ರೊನಾಲ್ಡೊ: ಕೋಲಾ ಕಂಪನಿಗೆ 4 ಬಿಲಿಯನ್ ಡಾಲರ್ ನಷ್ಟ!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಖ್ಯಾತ ಫುಟ್ಬಾಲ್ ಆಟಗಾರ ಪೋರ್ಚುಗಲ್‌ನ ಸೂಪರ್‌ಸ್ಟಾರ್‌ ಕ್ರಿಸ್ಟಿಯಾನೋ ರೊನಾಲ್ಡೊ ಕೋಕಾ-ಕೋಲಾ ಬಾಟಲಿಗಳನ್ನು ದೂರ ಸರಿಸಿ ನೀರು ಕುಡಿಯಿರಿ ಎಂದು ಹೇಳಿದ ವೀಡಿಯೋ ಸಾಕಷ್ಟು ವೈರಲ್ ಆದ ಬಳಿಕ ಕೋಲಾ ಕಂಪನಿಯು ಬರೋಬ್ಬರಿ 4 ಬಿಲಿಯನ್ ಡಾಲರ್ ನಷ್ಟ ಅನುಭವಿಸಿದೆ.
ರೊನಾಲ್ಡೊ ಕೋಕಾ-ಕೋಲಾ ಬಾಟಲಿಗಳನ್ನು ತೆರವುಗಳಿಸಿದ ಪರಿಣಾಮ ಕಂಪನಿಯ ಬ್ರ್ಯಾಂಡ್ ಮೇಲೆ ನಕಾರಾತ್ಮಕ ಪರಿಣಾಮ ಬೀರಿದ್ದು, ಇದರಿಂದಾಗಿ ಕೋಕಾ-ಕೋಲಾದ ಷೇರುಗಳ ಬೆಲೆಗಳು 1.6% ನಷ್ಟು ಕುಸಿದಿವೆ. ಈ ಮೂಲಕ 242 ಬಿಲಿಯನ್ ಡಾಲರ್‌ನಿಂದ 238 ಬಿಲಿಯನ್ ಡಾಲರ್‌ಗೆ ಷೇರುಗಳ ಮೌಲ್ಯ ಕುಸಿದಿದೆ. ಜೊತೆಗೆ 4 ಬಿಲಿಯನ್ ಡಾಲರ್‌ ನಷ್ಟವಾಗಿದೆ ಎಂದು ವರದಿಯಾಗಿದೆ. (ಭಾರತೀಯ ರೂಪಾಯಿಗಳಲ್ಲಿ ಸುಮಾರು 29,339 ಕೋಟಿ)
ಹಂಗೇರಿ ವಿರುದ್ಧದ ಯುರೋ 2020 ಪಂದ್ಯಕ್ಕೂ ಮುನ್ನ ಪೋರ್ಚುಗಲ್ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮೇಜಿನ ಮೇಲೆ ಕೋಕಾ-ಕೋಲಾ ಬಾಟಲಿಗಳನ್ನು ಇಟ್ಟಿದ್ದರು. ಇದನ್ನು ಕಂಡ ರೊನಾಲ್ಡೊ ಬಾಟಲಿಗಳನ್ನು ದೂರ ಸರಿಸಿ ನಂತರ ನೀರಿನ ಬಾಟಲಿಗಳನ್ನು ಕೈಗೆತ್ತಿಕೊಂಡು ಎಲ್ಲರೂ ಕೋಲಾ ಬದಲಿಗೆ ನೀರು ಕುಡಿಯಿರಿ ಎಂದು ಹೇಳಿದ್ದಾರೆ.
ಇದರಿಂದ ಯುರೋ 2020ರ ಪಂದ್ಯಾವಳಿಗೆ ಕೋಕಾ ಕೋಲಾ ಅಧಿಕೃತ ಪ್ರಮೋಟರ್ ಆಗಿದ್ದರೂ, ರೊನಾಲ್ಡೋ ವರ್ತನೆ ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss