ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, May 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಸಂಕಷ್ಟದಲ್ಲಿರುವವರಿಗೆ ತಕ್ಷಣ ಸ್ಪಂದಿಸುವ ‘112’ ವಾಹನಗಳಿಗೆ ಚಾಲನೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………………………………………

ಹೊಸ ದಿಗಂತ ವರದಿ, ಚಿಕ್ಕಮಗಳೂರು:

ಸಂಕಷ್ಟದಲ್ಲಿರುವವರಿಗೆ ತಕ್ಷಣ ಸ್ಪಂದಿಸುವ, ವಾರದ ಏಳೂ ದಿನ, ದಿನದ 24 ಗಂಟೆ ಕಾರ್ಯ ನಿರ್ವಹಿಸುವ ನಿಮ್ಮ ಮಿತ್ರ 112 ವಾಹನಗಳಿಗೆ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಎಂ.ಎಚ್.ಅಕ್ಷಯ್ ಶನಿವಾರ ಚಾಲನೆ ನೀಡಿದರು.

ಎಸ್‍ಪಿ ಕಚೇರಿ ಮುಂಭಾಗ ನಡೆದ ಸರಳ ಸಮಾರಂಭದಲ್ಲಿ ಒಟ್ಟು 16 ವಾಹನಗಳಿಗೆ ಅವರು ಹಸಿರು ನಿಶಾನೆ ತೋರಿದರು.

ಜಿಲ್ಲೆಯ ಯಾವುದೇ ಭಾದಲ್ಲಿರುವ ಜನರು ಆಪತ್ತಿಗೊಳಗಾದರೆ 112 ನಂಬರ್‍ಗೆ ಕರೆ ಮಾಡಬಹುದು ತಕ್ಷಣ ಸ್ಥಳೀಯ ಪೊಲೀಸ್ ಠಾಣೆಗೆ ವಿಷಯ ತಲುಪಲಿದ್ದು ಅಲ್ಲಿಂದ ನಿಮ್ಮ ಮಿತ್ರ ವಾಹನ ರಕ್ಷಣೆಗೆ ಧಾವಿಸಲಿದೆ ಎಂದು ತಿಳಿಸಿದರು.
ಇದೇ ವೇಳೆ 112 ವಾಹನ ಸೇವೆಯ ಮಾಹಿತಿ ನೀಡುವ ಪೋಸ್ಟರ್ ಮತ್ತು ಕರಪತ್ರಗಳನ್ನು ಅಪರಾಧ ಪತ್ತೆ ದಳದ ವೃತ್ತ ನಿರೀಕ್ಷಕ ಸತ್ಯನಾರಾಯಣ್ ಬಿಡುಗಡೆ ಮಾಡಿದರು.
ಇನ್ನು ಮುಂದೆ ಎಲ್ಲಿಯೇ ಅಪರಾಧ ಪ್ರಕರಣಗಳು ನಡೆದರೂ, ಸಾರ್ವಜನಿಕರು ಆಪತ್ತಿಗೆ ಸಿಕ್ಕರೂ ದೇಶಾದ್ಯಂತ ಪೊಲೀಸ್ ಸೇವೆ ಪಡೆಯಲು 112 ಕ್ಕೆ ತುರ್ತು ಕರೆ ಮಾಡಬಹುದು. ಅಗ್ನಿ ಅನಾಹುತ, ವಿಪತ್ತು ಸಂದರ್ಭ, ಕೊಲೆ, ಸುಲಿಗೆ ದರೋಡೆ, ಜೂಜು, ಮಾದಕ ವಸ್ತು ಮಾರಾಟ ಇನ್ನಿತರೆ ಯಾವುದೇ ಅಪರಾಧ ಸಂದರ್ಭದಲ್ಲಿ ಈ ಸಂಖ್ಯೆಗೆ ಕರೆ ಮಾಡಿದರೆ ಜಿಲ್ಲಾ ಕೇಂದ್ರದಲ್ಲಿ ಸ್ಥಾಪಿಸಲಾಗಿರುವ ಕಂಟ್ರೋಲ್‍ನಲ್ಲಿ ಸ್ವೀಕರಿ ನಂತರ ಸಂಬಂಧ ಪಟ್ಟ ಪೊಲೀಸ್ ಠಾಣೆಗೆ ತುರ್ತಾಗಿ ರವಾನಿಸಲಿದ್ದು, ನಂತರ ವಾಹನದೊಂದಿಗೆ ಸಿಬ್ಬಂದಿ ತಕ್ಷಣ ಧಾವಿಸಿ ನೆರವು ನೀಡಲಿದ್ದಾರೆ.
ಈ ಸೌಲಭ್ಯವನ್ನು ಅಗತ್ಯ ಇರುವವರು ಬಳಸಿಕೊಳ್ಳಬೇಕು ಎಂದು ಎಸ್ಪಿ ಅಕ್ಷಯ್ ಮನವಿ ಮಾಡಿದರು.
ಹೆಚ್ಚುವರಿ ಪೊಲೀಸ್ ಮುಖ್ಯಾಧಿಕಾರಿ ಶೃತಿ ಮತ್ತಿತರೆ ಸಿಬ್ಬಂದಿ ಉಪಸ್ಥಿತರಿದ್ದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss