Tuesday, July 5, 2022

Latest Posts

ಬಿಜೆಪಿಯ ಕಾನೂನು ಪ್ರಕೋಷ್ಠದಿಂದ ಉಚಿತ ಕಾನೂನು ಸೇವೆ ನೀಡುವುದಕ್ಕೆ ಚಾಲನೆ 

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ವರದಿ, ಮೈಸೂರು:

ನಗರದ ಚಾಮರಾಜಪುರಂನಲ್ಲಿರುವ ಬಿಜೆಪಿ ಕಾರ್ಯಲಯದಲ್ಲಿ ಉಚಿತ ಕಾನೂನು ಸೇವೆ ಚಟುವಟಿಕೆಗೆ ಬಿಜೆಪಿ ಮೈಸೂರು ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ ಶನಿವಾರ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಬಿಜೆಪಿಯಲ್ಲಿ  ಸುಮಾರು 26  ಪ್ರಕೋಷ್ಠಗಳಿದ್ದು, ಸಾರ್ವಜನಿಕ ರ ಸೇವೆಯಲ್ಲಿ ತೊಡಗಿವೆ.  ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜಾರಿಗೊಳಿಸಿರುವ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ  ನಿಟ್ಟಿನಲ್ಲಿ ಕೆಲಸ ನಿರ್ವಹಿಸುತ್ತಿವೆ. ಇದೀಗ ಜನರಿಗೆ ಉಚಿತವಾಗಿ ಕಾನೂನು ಸೇವೆ ಒದಗಿಸುವುದಕ್ಕೆ ಚಾಲನೆ ನೀಡಲಾಗಿದೆ.

ನಗರ ಕಾರ್ಯಾಲಯದಲ್ಲಿ ಪ್ರತಿ ನಾಲ್ಕನೇ ವಾರ ಬೆಳ್ಳಗೆ ಯಿಂದ ಸಂಜೆ ಯವರಿಗೆ  ಸಾರ್ವಜನಿಕರಿಗೆ ಸೇವೆ ನೀಡಲು ನಮ್ಮೇಲ್ಲ ವಕೀಲರು ಇರುತ್ತಾರೆ. ಹಾಗೇಯೆ ಮುಂದಿನ ದಿನದಲ್ಲಿ ಪ್ರತಿ ಎರಡನೇ ಶನಿವಾರ,ಹಾಗೂ ನಾಲ್ಕನೇ ಭಾನುವಾರ ಕಾರ್ಯಲಯದಲ್ಲಿ,ವಕೀಲರು ಹಾಗೂ ನೋಟರಿಯವರು ಉಚಿತವಾಗಿ ಜನಸಾಮಾನ್ಯರಿಗೆ ಸಲಹೆ ಹಾಗೂ ಸೇವೆಯನ್ನು ಕೊಡಲಾಗುವುದು. ಗ್ರಾಹಕರ ಹಿತರಕ್ಷಣಾ ಕಾಯ್ದೆಂ,ಮಾಹಿತಿ ಹಕ್ಕು ಅಧಿನಿಯಮ ಕಾಯ್ದೆ,ಸಿವಿಲ್ ವ್ಯಾಜ್ಯ ನ ಕಡೆ ಹೆಚ್ಚು ಗಮನ ನೀಡಿ ಉಚಿತವಾಗಿ ಕಾನೂನು ಸಲಹೆ ನೀಡುವ ಕಾರ್ಯನಿರ್ವಹಿಸಲಾಗುತ್ತದೆ  ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಕಾನೂನು ಸಂಚಾಲಕ ಶರತ್, ನಗರ ಸಂಚಾಲಕ ನಾಗೇಂದ್ರ ಪ್ರಸಾದ್,ಮೃಗಾಲಯ ಪ್ರಾಧಿಕಾರದ ಸದಸ್ಯ ಗೋಕುಲ್ ಗೋವರ್ಧನ್,  ಕಾನುನು ಪ್ರಕೊಷ್ಠದ ಸದಸ್ಯರಾದ ಪಣೀಶ್, ವಿಶ್ವನಾಥ್ ಕುಕ್ಕೆ, ಶಿವರಾಜ್, ಶಿವಕುಮಾರ್, ಸಿದ್ದೇಶ್ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss