Tuesday, August 9, 2022

Latest Posts

ತಾಳತ್ತಮನೆ-ಮೇಕೇರಿ ಬೈಪಾಸ್ ರಸ್ತೆ ಕಾಮಗಾರಿಗೆ ಚಾಲನೆ

ಹೊಸದಿಗಂತ ವರದಿ, ಕೊಡಗು:

ಮಡಿಕೇರಿ ತಾಲೂಕಿನ ತಾಳತ್ತಮನೆ-ಮೇಕೇರಿ ಬೈಪಾಸ್ ರಸ್ತೆ ಕಾಮಗಾರಿಗೆ ಶಾಸಕ ಕೆ.ಜಿ.ಬೋಪಯ್ಯ ಭೂಮಿ ಪೂಜೆ ನೆರವೇರಿಸಿದರು.
ರೂ.225 ಲಕ್ಷ ವೆಚ್ಚದಲ್ಲಿ‌ ಕಾಟಕೇರಿ ಉಡೋತ್‌ಮೊಟ್ಟೆ ರಸ್ತೆ ಸರಪಳಿ 2.50 ರಿಂದ 3.50ರ ವರೆಗೆ ರಸ್ತೆ ಸುರಕ್ಷತಾ ಕಾಮಗಾರಿ, ಕಗ್ಗೋಡ್ಲು-ಕಾಟಕೇರಿ ರಸ್ತೆ ಸರಪಳಿ 1.50 ರಿಂದ 2.50ರ ವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ, ರೂ.10 ಲಕ್ಷದಲ್ಲಿ ಕಗ್ಗೋಡ್ಲು, ಕಾಟಕೇರಿ ರಸ್ತೆ ಸರಪಳಿ 0.70 ರಿಂದ 1.50ರ ವರೆಗೆ ಭಾರೀ ಮಳೆಯಿಂದ ಕೊರೆದಿರುವ ಭಾಗದ ದುರಸ್ತಿ ಮತ್ತು ಅಭಿವೃದ್ಧಿ, ರೂ.167 ಲಕ್ಷದಲ್ಲಿ ಕಗ್ಗೋಡ್ಲು-ಕಾಟಕೇರಿ ರಸ್ತೆ ಸರಪಳಿ 0.00 ರಿಂದ 2.00 ರವರೆಗೆ ಮಳೆಯಿಂದ ಹಾನಿಯಾಗಿರುವ ರಸ್ತೆ ಅಭಿವೃದ್ಧಿ ಸೇರಿದಂತೆ ಒಟ್ಟು 402 ಲಕ್ಷ ರೂ. ಗಳಲ್ಲಿ ಕಾಮಗಾರಿ ನಡೆಯಲಿದೆ.
ಗುಣಮಟ್ಟದ ಕಾಮಗಾರಿಗೆ ಒತ್ತು ನೀಡುವಂತೆ ಶಾಸಕ ಬೋಪಯ್ಯ ಇದೇ ಸಂದರ್ಭ ತಿಳಿಸಿದರು.
ಮದೆ ಗ್ರಾ.ಪಂ ಸದಸ್ಯ ಜೀವನ್ ಕುಮಾರ್, ನವೀನ, ಮೇಕೇರಿ ಗ್ರಾ.ಪಂ ಅಧ್ಯಕ್ಷ ಬಿ.ಬಿ.ದಿನೇಶ್, ಸದಸ್ಯ ಎಂ.ಯು.ಹನೀಫ್ ಗುತ್ತಿಗೆದಾರರಾದ ಎಸ್.ಎಸ್.ರಾಜೇಂದ್ರ, ಬಿ.ಪಿ.ರಾಜೀವಲೋಚನ, ಯತೀಶ್, ಕವನ್, ಸಾಜಿಬ್ ಹಾಗೂ ಗ್ರಾಮಸ್ಥರು ಈ ಸಂದರ್ಭ ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss