VIRAL VIDEO| ಜಸ್ಟ್‌ ಮಿಸ್‌, ಸೆಕೆಂಡ್‌ನಲ್ಲಿ ಬಾಲಕ ಬಚಾವ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನಿರ್ಲಕ್ಷ್ಯದಿಂದ ರಸ್ತೆ ದಾಟುವ ಪ್ರಕರಣಗಳಲ್ಲಿ ಸಾಕಷ್ಟು ರಸ್ತೆ ಅಪಘಾತಗಳನ್ನು ನೋಡಿದ್ದೇವೆ. ಕ್ಷಣಾರ್ಧದಲ್ಲಿ ಮಾಡುವ ಸಣ್ಣ ತಪ್ಪುಗಳು ಭಾರಿ ಬೆಲೆ ತೆರಬೇಕಾಗುತ್ತದೆ. ರಸ್ತೆಯಲ್ಲಿ ನಮ್ಮ ಕಡೆಗೆ ನಿಧಾನವಾಗಿ ಬರುವ ವಾಹನಗಳಿಂದ ಆಗುವ ಅಪಾಯಗಳೂ ಈಗ ಅಪಾಯಕಾರಿಯಾಗಿ ಪರಿಣಮಿಸಿವೆ. ಯಾವಾಗ ಏನಾಗುತ್ತೋ ಗೊತ್ತಿಲ್ಲ. ಆದರೆ ಇತ್ತೀಚೆಗೆ ಇಂತಹದೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಆದರೆ ಈ ಅಪಘಾತದಲ್ಲಿ ಚಾಲಕ ಜಾಣತನದಿಂದ ವಾಹನ ಚಲಾಯಿಸಿ ಮಗುವಿನ ಪ್ರಾಣ ಉಳಿಸಿದ್ದಾರೆ. ಶಾಲೆ ಮುಗಿಸಿ ಇಬ್ಬರು ಮಕ್ಕಳೊಂದಿಗೆ ತಾಯಿ ಮನೆಗೆ ಬರುತ್ತಿದ್ದಾಗಲೇ ಮಗ ಏಕಾಏಕಿ ರಸ್ತೆ ದಾಟಲು ಯತ್ನಿಸಿದ್ದಾನೆ.

ಆದರೆ ಬಾಲಕ ರಸ್ತೆ ದಾಟುತ್ತಿದ್ದಾಗ ಅದೇ ಸಮಯದಲ್ಲಿ ವೇಗವಾಗಿ ಕಾರು ಬಂದಿದೆ.  ಎಚ್ಚೆತ್ತ ಚಾಲಕ ಅತ್ಯಂತ ಜಾಣತನದಿಂದ ಬಾಲಕನನ್ನು ರಕ್ಷಿಸಿದ್ದಾನೆ. ಏಕಾಏಕಿ ಕಾರಿನ ಸ್ಟೀರಿಂಗ್ ತಿರುಗಿದ್ದರಿಂದ ಕಾರು ರಸ್ತೆಯ ಪಕ್ಕಕ್ಕಿಳಿದಿದೆ. ಅಪಘಾತದಲ್ಲಿ ಬಾಲಕನಿಗೆ ಯಾವುದೇ ಗಾಯಗಳಾಗಿಲ್ಲ. ಈ ವಿಡಿಯೋಗೆ ನೆಟ್ಟಿಗರು ಪ್ರತಿಕ್ರಿಯಿಸಿದ್ದು, ಚಾಲಕನನ್ನು ಹೊಗಳುತ್ತಿದ್ದಾರೆ. ನಿನ್ನಿಂದ ಒಂದು ಜೀವ ಉಳಿದಿದೆ ಎಂದು ಕಮೆಂಟ್ ಮಾಡುತ್ತಿದ್ದಾರೆ. ಆದರೆ ಈ ಘಟನೆ ಎಲ್ಲಿ ನಡೆದಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!