ಬಿಪಿ ಲೋ ಆಗಿ ಸ್ಟೇರಿಂಗ್ ಮೇಲೆಯೇ ಕುಸಿದ ಚಾಲಕ: ಡಿವೈಡರ್ ಏರಿ ನಿಂತ ಖಾಸಗಿ ಬಸ್, ತಪ್ಪಿದ ಭಾರೀ ಅನಾಹುತ

ಹೊಸದಿಗಂತ ವರದಿ ಉಳ್ಳಾಲ: ಬಸ್ ಚಲಿಸುತ್ತಿದ್ದ ವೇಳೆ ಚಾಲಕನಿಗೆ ಬಿಪಿ ಲೋ ಆಗಿ ಅಸ್ವಸ್ಥತೆ ಉಂಟಾದ ಪರಿಣಾಮ ನಿಯಂತ್ರಣ ತಪ್ಪಿದ ಖಾಸಗಿ ಬಸ್ ರಸ್ತೆ ಮಧ್ಯದ ಡಿವೈಡರ್ ಏರಿ ನಿಂತ ಘಟನೆ ಮಂಗಳವಾರ ಬೆಳಿಗ್ಗೆ ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆ ಮುಂಭಾಗದಲ್ಲಿ ನಡೆದಿದೆ. ಅದೃಷ್ಟವಶಾತ್ ಬಸ್ಸಿನಲ್ಲಿದ್ದ ಪ್ರಯಾಣಿಕರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ಮುಡಿಪು–ಸ್ಟೇಟ್ ಬ್ಯಾಂಕ್ ಮಾರ್ಗದಲ್ಲಿ ಸಂಚರಿಸುವ ‘ಗೋಪಾಲಕೃಷ್ಣ’ ಹೆಸರಿನ ಖಾಸಗಿ ಸರ್ವಿಸ್ ಬಸ್ ಮುಡಿಪುವಿನಿಂದ ದೇರಳಕಟ್ಟೆ ತಲುಪಿದ ವೇಳೆ ಈ ಘಟನೆ ನಡೆದಿದೆ. ಬಸ್ ಚಾಲಕ ಜನಾರ್ಧನ್ … Continue reading ಬಿಪಿ ಲೋ ಆಗಿ ಸ್ಟೇರಿಂಗ್ ಮೇಲೆಯೇ ಕುಸಿದ ಚಾಲಕ: ಡಿವೈಡರ್ ಏರಿ ನಿಂತ ಖಾಸಗಿ ಬಸ್, ತಪ್ಪಿದ ಭಾರೀ ಅನಾಹುತ