ಚಾಲಕನ ನಿಯಂತ್ರಣ ತಪ್ಪಿ ಅಪಘಾತ: ಐವರಿಗೆ ಗಂಭೀರ ಗಾಯ

ಹೊಸದಿಗಂತ ವರದಿ, ಕಲಬುರಗಿ:

ನಗರದ ಹೊರವಲಯದ ಶಹಾಬಾದ್ ರಸ್ತೆಯ ಬಳಿಯಿರುವ ಕೆನ್ ಬ್ರಿಡ್ಜ್ ಶಾಲೆಯ ಹತ್ತಿರ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ ಅಫಘಾತವಾಗಿದೆ.

ಅಪಘಾತದಲಿ ಬಿಜೆಪಿ ಗ್ರಾಮಾಂತರ ಯುವ ಮೋಚಾ೯ದ ಮುಖಂಡನಿಗೆ ಗಾಯವಾಗಿ ಬಲಗಾಲು ಕಟ್ ಆಗಿದ್ದು, ಆತನನ್ನು ಸೇರಿದಂತೆ ಒಟ್ಟು ಕಾರಿನಲಿ ಸವಾರಿ ಮಾಡುತ್ತಿದ್ದ ಐವರಿಗೆ ಗಂಭೀರ ಗಾಯವಾಗಿವೆ.

ಗಾಯಾಳುಗಳು ನಗರದ ಜಗತ ಬಡಾವಣೆಯ ನಿವಾಸಿಗಳಾಗಿದ್ದು,ಅಫಘಾತದಲಿ ಗಾಯಗೊಂಡವರ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.

ಗಾಯಾಳುಗಳನ್ನು ಕಲಬುರಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಈ ಪ್ರಕರಣ ಸಂಬಂಧ ಸಂಚಾರಿ ಪೊಲೀಸ್ ಠಾಣೆ-2ರಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!