Wednesday, August 10, 2022

Latest Posts

ಚಾಲಕರು ಇನ್ಮುಂದೆ ಆರ್‌ಸಿ ಬುಕ್, ಡಿಎಲ್ ತೆಗೆದುಕೊಂಡು ಹೋಗಬೇಕಿಲ್ಲ, ಮೊಬೈಲ್ ಇದ್ರೆ ಸಾಕು!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಬೆಂಗಳೂರು ಪೊಲೀಸ್ ವಿಭಾಗವು ಡಿಜಿಟಲೀಕರಣಕ್ಕೆ ಮುಂದಾಗಿದ್ದು, ಇನ್ಮುಂದೆ ವಾಹನ ಸವಾರರು ಡಿಎಲ್, ಆರ್‌ಸಿ ಬುಕ್ ತೋರಿಸಬೇಕಿಲ್ಲ!
ಹೌದು, ಇನ್ಮುಂದೆ ಎಲ್ಲವೂ ಡಿಜಿಟಲ್ ಕಾಪಿ ಆಗಿದ್ದರೆ ಸಾಕು. ‘ಡಿಎಲ್, ಆರ್‌ಸಿ ಬುಕ್ ಮನೆಯಲ್ಲಿದೆ’ ಎಂದು ಸಬೂಬು ಹೇಳುವ ಸಮಯ ಮುಗಿದುಹೋಗಿದೆ.
ಡಿಜಿಟಲ್ ಕಾಪಿಗಳನ್ನು ಹಾಜರುಪಡಿಸಲು ಸರ್ಕಾರ ಅವಕಾಶ ನೀಡಿದ್ದು, ಪೊಲೀಸರು ಕೇಳಿದ ಡೀಟೇಲ್ಸ್‌ನನ್ನು ಮೊಬೈಲ್‌ನಲ್ಲಿ ಪ್ರದರ್ಶನ ಮಾಡಬಹುದಾಗಿದೆ.
ಈ ಬಗ್ಗೆ ಬೆಂಗಳೂರು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಡಾ.ಬಿ.ಆರ್. ರವಿಕಾಂತೇಗೌಡ ಮಾಹಿತಿ ನೀಡಿದ್ದಾರೆ.
ಡಿಜಿ ಲಾಕರ್ ಅಥವಾ ಎಂಪರಿವಾಹನ್ ಆಪ್‌ಗಳಲ್ಲಿ ದಾಖಲೆಗಳನ್ನು ಸಂಗ್ರಹ ಮಾಡಿ ಇಟ್ಟುಕೊಳ್ಳಬೇಕು. ನಿಯಮ ಜಾರಿ ಮಾಡುವ ಅಧಿಕಾರಿಗಳು ಮೊಬೈಲ್‌ನಲ್ಲಿ ಡಿಜಿಟಲ್ ರೂಪದಲ್ಲಿರುವ ಈ ದಾಖಲೆಗಳನ್ನು ಸ್ಕಾನ್ ಮಾಡಿ ಅಧಿಕೃತ ಎಂದು ಪರಿಗಣಿಸಬೇಕಿದೆ. ಈ ಎರಡು ಅಪ್ಲಿಕೇಶನ್‌ನಲ್ಲಿ ಇರುವ ದಾಖಲೆಗಳು ಮಾತ್ರ ಸ್ವೀಕಾರಾರ್ಹ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss