ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಕ್ಕಾಗಿ ಜೈಲುಶಿಕ್ಷೆ ಅನುಭವಿಸಿದ್ದ ಲಕ್ಷ್ಮೀ ಬಾಯಮ್ಮ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ದ್ರೋಣಂರಾಜು ಲಕ್ಷ್ಮೀ ಬಾಯಮ್ಮ (1898-1970) ಪಶ್ಚಿಮ ಗೋದಾವರಿ ಜಿಲ್ಲೆಯ ನರಸಾಪುರ ತಾಲೂಕಿನ ಮುತ್ಯಾಲಪಲ್ಲಿ ಗ್ರಾಮದವರು. ಅವರು 1898 ರಲ್ಲಿ ಸುಂದರ ರಾಮಯ್ಯ ಮತ್ತು ರಾಮ ಲಕ್ಷ್ಮಾಂಬ ದಂಪತಿಯ ಪುತ್ರಿಯಾಗಿ ಜನಿಸಿದರು. ಅಸಹಕಾರ ಚಳವಳಿಯ ಸಂದರ್ಭದಲ್ಲಿ ಗಾಂಧೀಜಿಯ ಪ್ರಭಾವಕ್ಕೊಳಗಾದ ಆಕೆ ವಿದೇಶಿ ಬಟ್ಟೆ ಅಂಗಡಿಗಳ ಪಿಕೆಟಿಂಗ್ ಅನ್ನು ಆಯೋಜಿಸಿದರು. ಇದಕ್ಕಾಗಿ ಆಕೆಗೆ 6 ತಿಂಗಳ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಯಿತು. ಆಕೆಯನ್ನು ವೆಲ್ಲೂರು ಮತ್ತು ಕನ್ನನೋರ್ ಜೈಲುಗಳಲ್ಲಿ ಸೆರೆವಾಸದಲ್ಲಿಡಲಾಯಿತು.
ಸ್ವಾತಂತ್ರ್ಯದ ಬಳಿಕ ಲಕ್ಷ್ಮೀ ಬಾಯಮ್ಮ 1958 ರಿಂದ 1966 ರವರೆಗೆ ಆಂಧ್ರಪ್ರದೇಶದ ವಿಧಾನ ಪರಿಷತ್ತಿನ ಸದಸ್ಯರಾಗಿದ್ದರು. ಅವರು ಮಹಿಳೆಯರು ಮತ್ತು ಹರಿಜನರ ಉನ್ನತಿಗಾಗಿ ಪ್ರವರ್ತಕ ಕೆಲಸ ಮಾಡಿದರು. ಮೂಲ ಶಿಕ್ಷಣ, ಖಾದಿ ಪ್ರಚಾರ ಮತ್ತು ಹಿಂದಿ ಪ್ರಚಾರದ ಪ್ರಗತಿಗಾಗಿ ಅವರು ಅವಿರತವಾಗಿ ಶ್ರಮಿಸಿದರು. ಅವರು ಆಂಧ್ರ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿದ್ದರು. ಅವರು ತೆಲುಗಿನಲ್ಲಿ ಭಗವದ್ಗೀತೆ ಮತ್ತು ರಾಮಾಯಣವನ್ನು ರಚಿಸಿದ್ದಾರೆ ಮತ್ತು ಕೃಷ್ಣ ಸತಕಂ, ವೀರಮತಿ ಮತ್ತು ಶಾಂತಿ ಕಾಮುಡು ಸೇರಿದಂತೆ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಅವರು ಕಸ್ತೂರ್ಬಾ ಟ್ರಸ್ಟ್ ಮತ್ತು ಭಾರತ್ ಸೇವಕ ಸಮಾಜದ ಜಿಲ್ಲಾ ಕಾರ್ಯದರ್ಶಿಯಾಗಿದ್ದರು. ಜೊತೆಗೆ ಗಾಂಧಿ ಸ್ಮಾರಕ ನಿಧಿಯ ಉಪಾಧ್ಯಕ್ಷೆಯಾಗಿಯೂ ಕಾರ್ಯನಿರ್ವಹಿಸಿದ್ದರು. ನೆಲ್ಲೂರಿನಲ್ಲಿ ಕಸ್ತೂರಿ ದೇವಿ ವಿದ್ಯಾಲಯ ಮತ್ತು ಕೈಗಾರಿಕಾ ಶಾಲೆಯ ಸ್ಥಾಪನೆಗೆ ಅವರು ಕಾರಣರಾಗಿದ್ದರು. ಕಲ್ಷ್ಮಿ ಅವರು  1970 ರ ಆಗಸ್ಟ್ 27 ರಂದು ನಿಧನರಾದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!