Thursday, July 7, 2022

Latest Posts

ಡ್ರಗ್ಸ್ ಪ್ರಕರಣ: ಆರ್ಯನ್ ಖಾನ್ ಜಾಮೀನು ಅರ್ಜಿ ವಜಾ

ಹೊಸದಿಗಂತ ಆನ್ ಲೈನ್ ಡೆಸ್ಕ್:

ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಯನ್ ಖಾನ್ ಜಾಮೀನು ಅರ್ಜಿಯನ್ನು ಮುಂಬೈನ ನ್ಯಾಯಾಲಯ ತಿರಸ್ಕರಿಸಿದೆ.
ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಆರ್. ಎಂ. ನೆರ್ಲಿಕರ್ ಅರ್ಜಿಯನ್ನು ತಿರಸ್ಕರಿಸಿದರು.
ಆರ್ಯನ್ ಪರ ಸತೀಶ್ ಮಾನೆಶಿಂಧೆ ವಾದ ಮಂಡಿಸಿದರು. ಆರ್ಯನ್ ಖಾನ್ ಅವರ ಎನ್​ಸಿಬಿ ಕಸ್ಟಡಿಯ ಅವಧಿಯು ಇಂದಿಗೆ ಮುಗಿದಿದ್ದು, ನ್ಯಾಯಾಲಯವು ನಿನ್ನೆ (ಅಕ್ಟೋಬರ್ 7) 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶಿಸಿತ್ತು. ಆದ್ದರಿಂದ ಆರ್ಯನ್ ಜಾಮೀನು ಅರ್ಜಿಯ ವಿಚಾರಣೆ ಮಹತ್ವದ್ದಾಗಿತ್ತು. ಈ ಕುರಿತು ತೀರ್ಪು ನೀಡಿರುವ ನ್ಯಾಯಾಲಯವು ಆರ್ಯನ್​ಗೇ ಜಾಮೀನು ನೀಡಿಲ್ಲ.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಜಾಮೀನು ಅರ್ಜಿ ಊರ್ಜಿತವಲ್ಲವೆಂದು ಕೋರ್ಟ್​ ಅಭಿಪ್ರಾಯ ಪಟ್ಟಿದೆ. ಪ್ರಕರಣದ 8 ಆರೋಪಿಗಳ ಜಾಮೀನು ಅರ್ಜಿ ವಜಾ ಮಾಡಿದೆ. ಸೆಷನ್ ಕೋರ್ಟ್ ಮೊರೆ ಹೋಗಲು ಆರ್ಯನ್ ಖಾನ್ ಪರ ವಕೀಲರು ಈಗ ಚಿಂತನೆ ನಡೆಸಿದ್ದಾರೆ. ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶ ಕೈಲುಪುತ್ತಿದ್ದಂತೆ ಮೇಲ್ಮನವಿ ಸಲ್ಲಿಸಲು ಪ್ಲಾನ್ ರೂಪಿಸಲಾಗಿದೆ.
ನ್ಯಾಯಾಂಗ ಬಂಧನ ವಿಧಿಸಿದ್ದ ಕಾರಣ, ಎನ್​ಸಿಬಿ ಅಧಿಕಾರಿಗಳು ಆರ್ಯನ್ ಖಾನ್ ಇತರ ಆರೋಪಿಗಳನ್ನು ಮೆಡಿಕಲ್ ಟೆಸ್ಟ್​ಗೆ ಒಳಪಡಿಸಿ ಆರ್ಥರ್ ಜೈಲಿಗೆ ಕರೆದೊಯ್ದಿದ್ದರು. ಇದೀಗ ನ್ಯಾಯಾಲಯದ ಆದೇಶದ ಅನ್ವಯ ಆರ್ಯನ್​ಗೆ ಜಾಮೀನು ಸಿಕ್ಕಿಲ್ಲ. ಹೀಗಾಗಿ, ಅವರು ಜೈಲಿನಲ್ಲೇ ಇರುವುದು ಅನಿವಾರ್ಯ ಆಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss