ಮಲಯಾಳಂ ಚಿತ್ರರಂಗದಲ್ಲಿ ಡ್ರಗ್ಸ್ ಹಾವಳಿ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಎಂದ ಪೊಲೀಸ್ ಕಮಿಷನರ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಲಯಾಳಂ ಚಿತ್ರೋದ್ಯಮದಲ್ಲಿ (Film Industry) ಡ್ರಗ್ಸ್ ಹಾವಳಿ ಸದ್ದು ಮಾಡುತ್ತಿದೆ.

ಈ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದ ಕೇರಳ (Kerala) ಪೊಲೀಸ್ ಕಮಿಷನರ್, ಕಾನೂನು ಉಲ್ಲಂಘಿಸುವವರನ್ನು ಮುಲಾಜಿಲ್ಲದೆ ಮಟ್ಟಹಾಕಲು ನಿರ್ಧರಿಸಿದ್ದಾರೆ.

ಕೊಚ್ಚಿ ಮಲಯಾಳಂ ಚಿತ್ರರಂಗದ ಪ್ರಧಾನ ಕಚೇರಿಯಲ್ಲಿ ಮಾತನಾಡಿದ ಕೊಚ್ಚಿ ನಗರ ಪೊಲೀಸ್ ಕಮಿಷನರ್ ಕೆ. ಸೇತುರಾಮನ್ , ‘ಡ್ರಗ್ಸ್ ಹಾವಳಿಯಲ್ಲಿ ತೊಡಗಿರುವವರು ಯಾರು ಎಂದು ನಮಗೆ ತಿಳಿದಿದೆ ಮತ್ತು ಸಮಸ್ಯೆಯೆಂದರೆ ನಾವು ಹೋಗಿ ಅವರನ್ನು ಕಸ್ಟಡಿಗೆ ತೆಗೆದುಕೊಳ್ಳಲು ಸಾಧ್ಯವಿಲ್ಲ. ಅವರು ಅದನ್ನು (ಡ್ರಗ್ಸ್) ಬಳಸುವಾಗ ಅಥವಾ ಅದನ್ನು ಹೊಂದಿರುವಾಗ ನಾವು ಅವರನ್ನು ಬಂಧಿಸಬಹುದು. ಸಾಮಾನ್ಯವಾಗಿ, ಅವರಿಗೆ ಅವರ ಆಪ್ತ ಸಹಾಯಕರು ಡ್ರಗ್ಸ್ ಅನ್ನು ಪೂರೈಸುತ್ತಾರೆ.ಇಂದಲ್ಲ ನಾಳೆ ನಾವು ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ’ ಎಂದು ಹೇಳಿದರು.

ಚಿತ್ರರಂಗದ ಪ್ರಮುಖರು ಈ ಅಭ್ಯಾಸವನ್ನು ಬೇರುಸಮೇತ ಕಿತ್ತೊಗೆಯಲು ತಮ್ಮೊಂದಿಗೆ ಇದ್ದಾರೆ. ಉದ್ಯಮದಲ್ಲಿರುವ ಈಗಿನ ದಿಗ್ಗಜರು ಡ್ರಗ್ಸ್ ಬಳಸಿ ಈ ಮಟ್ಟಕ್ಕೆ ಬಂದಿಲ್ಲ. ನಾವು ಉದ್ಯಮವನ್ನು ಸ್ವಚ್ಛಗೊಳಿಸುತ್ತೇವೆ ಮತ್ತು ಪೊಲೀಸರು ಆ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ಸೇತುರಾಮನ್ ಹೇಳಿದರು.

ಮಲಯಾಳಂ ಚಿತ್ರರಂಗದಲ್ಲಿ ಡ್ರಗ್ಸ್ ಬಳಕೆ ಇದೆ ಎಂಬುದನ್ನು ಮಲಯಾಳಂ ಚಿತ್ರರಂಗ ಒಕ್ಕೂಟ (ಅಮ್ಮಾ)ವೇ ಒಪ್ಪಿಕೊಂಡಿದ್ದು, ಸೂಕ್ತ ತನಿಖೆ ಹಾಗೂ ಕ್ರಮಕ್ಕೆ ಸರ್ಕಾರಕ್ಕೆ ಮನವಿ ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!