Tuesday, June 28, 2022

Latest Posts

ಮೆಡಿಕಲ್ ಸ್ಟೋರ್ ನಲ್ಲಿ ಡ್ರಗ್ಸ್ ಮಾರುತ್ತಿದ್ದ ಮೂವರ ಬಂಧನ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………………….

ಹೊಸ ದಿಗಂತ ವರದಿ, ಮೈಸೂರು:

ಮೆಡಿಕಲ್ ಸ್ಟೋರ್ನಲ್ಲಿ ಔಷಧಿ ಹೆಸರಿನಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಮೂವರನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ
ಮೈಸೂರಿನ ಕೆ.ಆರ್.ನಗರದ ಬಾಲಾಜಿ ಮೆಡಿಕಲ್ಸ್ ನಲ್ಲಿ ಔಷಧಿ ಹೆಸರಿನಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ರಾಜೇಶ್, ಶ್ರೀಕಂಠ ಹಾಗೂ ಶಿವಕುಮಾರ್ ಬಂಧಿತ ಆರೋಪಿಗಳು. ಇವರು ಬುದ್ಧಿಮಾಂಧ್ಯ ಮಕ್ಕಳಿಗೆ ನಿದ್ದೆ ಬರಲು ನೀಡಲಾಗುವ ಮಾತ್ರೆಗಳನ್ನು ಅತಿ ಹೆಚ್ಚಾಗಿ ಮಾರಾಟ ಮಾಡುತ್ತಿದ್ದರು. ಈ ಮಾತ್ರೆಯನ್ನು ಜ್ಯೂಸ್ ನಲ್ಲಿ ಹಾಕಿ ಕುಡಿದರೆ ಮದ್ಯ ಸೇವಿಸಿದಷ್ಟೆ ನಶೆ ಇರುತ್ತದೆ. ಹೀಗೆ ಹಲವು ಮಾತ್ರೆಗಳನ್ನು 10 ರೂಪಾಯಿಯಿಂದ ಸಾವಿರ ರೂಪಾಯಿ ತನಕ ಮಾರಾಟ ಮಾಡಿ ಆರೋಪಿಗಳು ತಮ್ಮ ಖಜಾನೆ ತುಂಬಿಸಿಕೊಳ್ಳುತ್ತಿದ್ದರು.
ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ ಅಬಕಾರಿ ಸಿಬ್ಬಂದಿಗಳು ಮೆಡಿಕಲ್ ಸ್ಟೋರ್ ಮೇಲೆ ದಾಳಿ ಮಾಡಿದರು. ಈ ಮೂವರು ಆರೋಪಿ ಗಳನ್ನು ಬಂಧಿಸಿದ್ದಾರೆ.
ಅಬಕಾರಿ ಡಿಸಿ ಡಾ.ಮಹಾದೇವಿ ಬಾಯಿ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ವಿಕ್ರಮ ಹಾಗೂ ಶ್ರೀರಾಮ್, ಇನ್ಸ್ ಪೆಕ್ಟರ್ ಲೋಕೇಶ್ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss