Monday, August 8, 2022

Latest Posts

ಮದ್ಯದ ಅಮಲಿನಲ್ಲಿ ತೂರಾಡಿದ ಕಾಲೇಜು ವಿದ್ಯಾರ್ಥಿಗಳು

ಹೊಸದಿಗಂತ ವರದಿ, ಶಿವಮೊಗ್ಗ:

ನಗರದ ಪ್ರತಿಷ್ಠಿತ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳ ಗುಂಪೊಂದು ಮದ್ಯದ ಅಮಲಿನಲ್ಲಿ ತೂರಾಡಿರುವ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಸೋಮವಾರ ವೈರಲ್ ಆಗಿದೆ.
ಅಮಲಿನಲ್ಲಿದ್ದ ಮೂರ್ನಾಲ್ಕು ವಿದ್ಯಾರ್ಥಿಗಳು ಕಾಲೇಜು ಎದುರೇ ತೂರಾಡುತ್ತಿರುವ ವಿಡಿಯೋ ಇದಾಗಿದೆ. ಬಸ್‌ನಲ್ಲಿದ್ದ ಕೆಲವರು ವಿಡಿಯೋ ಮಾಡಿದ್ದಾರೆ. ವಿದ್ಯಾರ್ಥಿಯೊಬ್ಬ ಕಾಲೇಜು ಸಮವಸ್ತ್ರದಲ್ಲೇ ಮುಖ ಕೆಳಗೆ ಮಾಡಿ ಬಿದ್ದಿದ್ದಾನೆ. ಮತ್ತೊಬ್ಬ ವಿದ್ಯಾರ್ಥಿ ತಲೆ ಬಗ್ಗಿಸಿದ್ದಾನೆ. ಇನ್ನೊಬ್ಬ ತೂರಾಡಿಕೊಂಡು ಓಡಾಡುತ್ತಿರುವ ವಿಡಿಯೋ ಇದಾಗಿದೆ. ತಲೆ ಕೆಳಗೆ ಹಾಕಿ ಕುಳಿತಿದ್ದ ವಿದ್ಯಾರ್ಥಿ ದಿಢೀರ್ ಎದ್ದು ಮುಂದಕ್ಕೆ ಹೋಗಿ ನಿಲ್ಲುವುದಕ್ಕೂ ಆಗದೆ ಬೀಳುತ್ತಾನೆ.
ಘಟನೆ ನಡೆದಿದ್ದು ಯಾವಾಗ ಎಂಬುದು ಸ್ಪಷ್ಟವಾಗಿಲ್ಲ. ಮದ್ಯ ಸೇವಿಸಿದ್ದ ವಿದ್ಯಾರ್ಥಿಗಳು ಕಾಲೇಜಿನ ಬಸ್ ಹತ್ತಲು ಮುಂದಾದಾಗ ಭದ್ರತಾ ರಡೆದಿದ್ದಾರೆ. ಬಳಿಕ ತೂರಾಡಿದ್ದಾರೆ.
ಕಾಲೇಜು ಮುಂಭಾಗ ವಿದ್ಯಾರ್ಥಿಗಳು ತೂರಾಡುತ್ತಿರುವುದನ್ನು ಕಂಡ ಭದ್ರತಾ ಸಿಬ್ಬಂದಿ ಮತ್ತು ಇತರ ವಿದ್ಯಾರ್ಥಿಗಳು ಗಾಂಜಾ ಸೇವನೆ ವಾಡಿರಬೇಕು ಎಂದು ಭಾವಿಸಿದ್ದಾರೆ. ತಕ್ಷಣ  ಭದ್ರತಾ ಸಿಬ್ಬಂದಿ ಕಾಲೇಜು ಆಡಳಿತ ಮಂಡಳಿ ಗಮನಕ್ಕೆ ತಂದಿದ್ದಾರೆ. ಬಳಿಕ ವಿದ್ಯಾರ್ಥಿಗಳ ಪಾಲಕರನ್ನು ಕಾಲೇಜಿಗೆ ಕರೆಸಿ ಬುದ್ಧಿವಾದ ಹೇಳಿ ಎಚ್ಚರಿಕೆ ನೀಡಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss