ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಫಾಫ್ ಡು ಪ್ಲೆಸಿಸ್ ಅರ್ಧಶತಕದ ನೆರವಿಂದ ಚೆನ್ನೈ ಸೂಪರ್ ಕಿಂಗ್ಸ್ ಎದುರಾಳಿ ಪಂಜಾಬ್ ಕಿಂಗ್ಸ್ ತಂಡಕ್ಕೆ ಗೆಲ್ಲಲು ಕೇವಲ 135 ರನ್ಗಳ ಸಾಧಾರಣ ಗುರಿ ನೀಡಿದೆ.
ಟಾಸ್ ಸೋತು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 134 ರನ್ಗಳಿಸಿತು. ಆರಂಭಿಕ ಬ್ಯಾಟರ್ ಫಾಫ್ ಡು ಪ್ಲೆಸಿಸ್ 55 ಎಸೆತಗಳಲ್ಲಿ 8 ಬೌಂಡರಿ ಮತ್ತು 2 ಸಿಕ್ಸರ್ ಸಹಿತ 76 ರನ್ಗಳಿಸಿ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
ರುತುರಾಜ್ ಗಾಯಕ್ವಾಡ್ 12, ಮೊಯೀನ್ ಅಲಿ ಯಾವುದೆ ರನ್ಗಳಿಸದೆ ಅರ್ಶದೀಪ್ ಸಿಂಗ್ಗೆ ವಿಕೆಟ್ ಒಪ್ಪಿಸಿದರು.ಕನ್ನಡಿಗ ರಾಬಿನ್ ಉತ್ತಪ್ಪ(2) ಮತ್ತು ಅಂಬಾಟಿ ರಾಯುಡು(4) ಇಂಗ್ಲೆಂಡ್ ವೇಗಿ ಜೋರ್ಡನ್ ಬೌಲಿಂಗ್ನಲ್ಲಿ ದೊಡ್ಡ ಹೊಡೆತದ ಪ್ರಯತ್ನದಲ್ಲಿ ವಿಕೆಟ್ ಒಪ್ಪಿಸಿದರು. ನಾಯಕ ಧೋನಿ 15 ಎಸೆತಗಳಲ್ಲಿ 12 ರನ್ಗಳಿಸಿ ಯುವ ಸ್ಪಿನ್ನರ್ ರವಿ ಬಿಷ್ಣೋಯ್ ಬೌಲಿಂಗ್ನಲ್ಲಿ ಬೌಲ್ಡ್ ಆಗಿ ಮತ್ತೊಮ್ಮೆ ನಿರಾಶೆ ಮೂಡಿಸಿದರು. ರವೀಂದ್ರ ಜಡೇಜಾ ಅಜೇಯ 15 ಮತ್ತು ಬ್ರಾವೋ ಅಜೇಯ 4 ರನ್ಗಳಿಸಿದರು.
ಪಂಜಾಬ್ ಕಿಂಗ್ಸ್ ಪರ ಅರ್ಶದೀಪ್ ಸಿಂಗ್ 35ಕ್ಕೆ 2, ಕ್ರಿಸ್ ಜೋರ್ಡನ್ 20ಕ್ಕೆ 2, ರವಿ ಬಿಷ್ಣೋಯ್ 25ಕ್ಕೆ1 ಮತ್ತು ಮೊಹಮ್ಮದ್ ಶಮಿ 22ಕ್ಕೆ1 ವಿಕೆಟ್ ಪಡೆದು ಮಿಂಚಿದರು.