spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, December 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ದುಬೈನ ಹೂಡಿಕೆ ಸಮಾಗಮದಲ್ಲಿ ಸಚಿವ ನಿರಾಣಿ ಕರ್ನಾಟಕವನ್ನು ಬಿಂಬಿಸಿದ ರೀತಿ ಹೀಗಿತ್ತು

- Advertisement -Nitte

ಹೊಸ ದಿಗಂತ ಆನ್ಲೈನ್ ಡೆಸ್ಕ್

ಜಾಗತಿಕ ಹೂಡಿಕೆದಾರರನ್ನು ಒಂದೆಡೆ ಸೇರಿಸುವ ದುಬೈ ಎಕ್ಸಪೊ 2020ಯಲ್ಲಿ ಭಾರತದ ಪ್ರಾತಿನಿಧ್ಯ ಎಲ್ಲರ ಕಣ್ಣು ಕುಕ್ಕಿಸುವಂತೆಯೇ ಇದೆ. ಈ ಬಗ್ಗೆ ಹೆಚ್ಚಿನ ವಿವರಗಳಿಗೆ ನಮ್ಮ ಹಿಂದಿನ ಬರಹ ಓದಬಹುದು. ಇಂಥ ಎಕ್ಸ್ಪೊಕ್ಕೆ ಕರ್ನಾಟಕವನ್ನು ಪ್ರತಿನಿಧಿಸಿ, ಇಲ್ಲಿಗೆ ಉದ್ಯಮಗಳನ್ನು ಸೆಳೆಯುವುದಕ್ಕೆ ಹೋಗಿದ್ದ ನಿಯೋಗದ ನೇತೃತ್ವ ವಹಿಸಿದ್ದರು ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವರಾದ ಮುರುಗೇಶ ನಿರಾಣಿ. 

ಭಾನುವಾರ ಅವರು ಮೇಳದಲ್ಲಿ ಭಾಗವಹಿಸಿ ಹೂಡಿಕೆದಾರರೆದುರು ಕರ್ನಾಟಕದ ಸಾಮರ್ಥ್ಯವನ್ನು ಬಿಚ್ಚಿಡುವುದಕ್ಕೆ ಆಯ್ದುಕೊಂಡಿದ್ದ ವಿಷಯ- “ವಾಯುಯಾನ, ರಕ್ಷಣೆ ಮತ್ತು ಬಾಹ್ಯಾಕಾಶಗಳಲ್ಲಿ ಕರ್ನಾಟಕದಲ್ಲಿರುವ ಅವಕಾಶ.”

ಅವರ ಭಾಷಣ ಈ ನಿರ್ದಿಷ್ಟ ವಲಯಗಳಲ್ಲಿ ಕರ್ನಾಟಕದ ಸಾಮರ್ಥ್ಯವನ್ನು ಕಟ್ಟಿಕೊಟ್ಟ ರೀತಿ ಹೀಗಿತ್ತು- 

“ಏರೋಸ್ಪೇಸ್ ವಿಭಾಗದಲ್ಲಿ ಭಾರತದಲ್ಲೇ ಅತಿದೊಡ್ಡ ಕೈಗಾರಿಕ ಸಮುಚ್ಛಯ ಕರ್ನಾಟಕವೇ. ಅಷ್ಟೇ ಅಲ್ಲ, ಬೃಹತ್ ಎಲೆಕ್ಟ್ರಿಕ್ ಯಂತ್ರಗಳ ತಯಾರಿಕೆಯಲ್ಲಿ ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. ಭಾರತದ ಯಂತ್ರಸಲಕರಣೆಗಳ ಪೈಕಿ ಶೇ.60ರಷ್ಟನ್ನು ಬೆಂಗಳೂರೇ ಉತ್ಪಾದಿಸುತ್ತದೆ. ಚಿಪ್ ವಿನ್ಯಾಸದಲ್ಲಿ ನಮ್ಮ ರಾಜ್ಯ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಡಸಾಲ್ಟ್ ಸಿಸ್ಟಮ್ಸ್ ಜತೆ ಸಹಭಾಗಿತ್ವ ಹೊಂದಿ ನಾವು ರೂಪಿಸಿರುವ ಸೆಂಟರ್ ಆಫ್ ಎಕ್ಸಲೆನ್ಸ್ ಕೈಗಾರಿಕೆಗಳಿಗೆ ಸನ್ನದ್ಧ ಮಾನವ ಸಂಪನ್ಮೂಲವನ್ನು ಒದಗಿಸುತ್ತಿದೆ. ಕರ್ನಾಟಕದಲ್ಲಿ ಸುಮಾರು 2,000 ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳಿವೆ. ಏರೋಸ್ಪೋಸ್ ಮತ್ತು ರಕ್ಷಣಾ ವಲಯಗಳಲ್ಲಿ ಉಪ-ಗುತ್ತಿಗೆಗಳನ್ನು ಪೂರೈಸುವುದಕ್ಕೆ ಇವು ಸಹಾಯಕ್ಕೆ ಬರುತ್ತವೆ. ಹೀಗಾಗಿ ಜಾಗತಿಕ ಉದ್ದಿಮೆದಾರರು ನಮ್ಮ ರಾಜ್ಯದಲ್ಲಿ ನೆಲೆ ಊರುವುದಕ್ಕೆ ಹಾಗೂ ಉದ್ಯಮ ವಿಸ್ತರಿಸಿಕೊಳ್ಳುವುದಕ್ಕೆ ಅನುವಾಗುವ ಎಲ್ಲ ವಾತಾವರಣವಿದೆ.”

ಪ್ಯಾಕೇಜಿಂಗ್ ವಲಯದಲ್ಲಿ ಕಾರ್ಯನಿರತವಾಗಿರುವ ಯುನೈಟೆಡ್ ಪಾರ್ಸಲ್ ಸರ್ವೀಸ್ ನಿಯೋಗದೊಂದಿಗೆ ಹಾಗೂ ವಾರ್ಷಿಕ ಹೂಡಿಕೆ ಸಮಾವೇಶ ಏರ್ಪಡಿಸುವ ಯುಎಇ ಸಚಿವಾಲಯದ ಜತೆಗೂ ಸಚಿವ ನಿರಾಣಿ ಸಮಾಲೋಚನೆಗಳಲ್ಲಿ ಪಾಲ್ಗೊಂಡರು. 

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss