ಹೊಸಾ ಚಾಕು ತಂದಾಗಲೇ ನಾವು ಗಾಯ ಮಾಡ್ಕೊಳ್ಳೋದು, ಹಳೆ ಚಾಕುವಿನಲ್ಲಿ ತರಕಾರಿನೆ ಕಟ್ ಆಗೋಲ್ಲ, ಇನ್ನು ನಮ್ಮ ಬೆರಳಿಗೆ ಏನಾದೀತು ಅನ್ನೋದು ನಿಮ್ಮ ಮಾತು!
ಆದರೆ ಮೊಂಡಾದ ಚಾಕು ಶಾರ್ಪ್ ಆದ ಚಾಕುಗಿಂತಲೂ ಡೇಂಜರ್ ಅನ್ನೋದು ನಮ್ಮ ಮಾತು.. ಇದು ಹೇಗೆ ಅಂತಲೂ ಹೇಳ್ತೇವೆ..
ನಿಮ್ಮ ಮನೆಯ ಚಾಕು ಮೊಂಡಾಗಿದ್ದರೂ ಕಷ್ಟಪಟ್ಟು ಕತ್ತರಿಸಿದರೆ ತರಕಾರಿ ಕಟ್ ಆಗುತ್ತದೆ.
ಹೊಸ ಚಾಕುವಿನಲ್ಲಿ ತರಕಾರಿ ಕಟ್ ಮಾಡೋಕೆ ಹೆಚ್ಚು ಪ್ರೆಶರ್ ಬೇಕಿಲ್ಲ. ಸಣ್ಣ ಪ್ರೆಶರ್ನಲ್ಲೇ ಕೆಲಸ ಆಗಿಬಿಡುತ್ತದೆ. ಆದರೆ ಹಳೆ ಚಾಕುವಿನಲ್ಲಿ ಕತ್ತರಿಸೋಕೆ ಹೆಚ್ಚು ಪ್ರೆಶರ್ ಹಾಕಿದಾಗ, ತರಕಾರಿ ಕಟ್ ಆಗದೆ ಚಾಕು ಜಾರುತ್ತದೆ. ಆದರೆ ಸೇಮ್ ಪ್ರೆಶರ್ ಇರುವುದರಿಂದ ಬೆರಳು ಕತ್ತರಿಸುವ ಸಾಧ್ಯತೆ ಹೆಚ್ಚಿದೆ.