ಒಟಿಟಿಗೆ ʼಸೆಲ್ಯೂಟ್‌ʼ: ನಟ ದುಲ್ಕರ್‌ ಚಿತ್ರಗಳನ್ನು ಬ್ಯಾನ್‌ ಮಾಡಿದ ಥಿಯೇಟರ್‌ ಮಾಲೀಕರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಮಳೆಯಾಳಂ ಸುಪರ್‌ ಸ್ಟಾರ್‌ ದುಲ್ಕರ್ ಸಲ್ಮಾನ್ ಅವರ ಚಿತ್ರಗಳನ್ನು ಕೇರಳ ಚಿತ್ರಮಂದಿರ ಮಾಲೀಕರು ಬ್ಯಾನ್‌ ಮಾಡಿದ್ದಾರೆ.
ಚಿತ್ರಮಂದಿರಗಳೊಂದಿಗಿನ ಒಪ್ಪಂದ ಮುರಿದು ದುಲ್ಕರ್ ಅಭಿನಯದ ಸೆಲ್ಯೂಟ್ ಚಿತ್ರವನ್ನು ನೇರವಾಗಿ ಓಟಿಟಿಯಲ್ಲಿ ಬಿಡುಗಡೆ ಮಾಡಿದ್ದಕ್ಕೆ ಕ್ರೋಧಗೊಂಡಿರುವ ಥಿಯೇಟರ್‌ಗಳ ಮಾಲೀಕರು ದುಲ್ಕರ್‌ ಚಿತ್ರಗಳನ್ನು ಬ್ಯಾನ್‌ ಮಾಡಲು ಮುಂದಾಗಿದ್ದಾರೆ. ದುಲ್ಕರ್‌ ಅವರು ಸಲ್ಯೂಟ್‌ ಚಿತ್ರವನ್ನು ಒಟಿಟಿಗಿಂತ ಮೊದಲು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವುದಾಗಿ ಮಾಡಿದ್ದ ಒಪ್ಪಂದವನ್ನು ಉಲ್ಲಂಘಿಸಿದ್ದಾರೆ ಎಂದು ಒಕ್ಕೂಟ ಆರೋಪಿಸಿದೆ.
ಇನ್ನು ಮುಂದೆ ದುಲ್ಕರ್ ಸಲ್ಮಾನ್ ಮತ್ತು ಅವರ ನಿರ್ಮಾಣ ಸಂಸ್ಥೆ ವೇಫೇರರ್ ಫಿಲ್ಮ್ಸ್ಗೆ ಯಾವುದೇ ರೀತಿಯ ಸಹಕಾರ ನೀಡುವದಿಲ್ಲ ಎಂದು ಒಕ್ಕೂಟವು ಘೋಷಿಸಿದೆ. ಈ ಸಂಬಂಧ ಮಾತನಾಡಿರುವ ಒಕ್ಕೂಟದ ಪ್ರತಿನಿಧಿ ಕೆ. ವಿಜಯ ಕುಮಾರ್‌, ದುಲ್ಕರ್ ಕೇರಳದ ಚಿತ್ರಮಂದಿರಗಳಲ್ಲಿ ತಮ್ಮ ಚಿತ್ರ ಬಿಡುಗಡೆ ಮಾಡುವ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಅವರೇ ಸಹಿ ಮಾಡಿದ ಒಪ್ಪಂದವನ್ನು ಅವರು ಗೌರವಿಸಿಲ್ಲ. ಆದ್ದರಿಂದ ಒಕ್ಕೂಟ ಕಠಿಣ ನಿರ್ಧಾರ ಕೈಗೊಂಡಿದೆ ಎಂದಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ವೇಫೇರರ್‌ ಸಂಸ್ಥೆಯ ಪ್ರತಿನಿಧಿ, ಮೊದಲು ಒಟಿಟಿಯಲ್ಲಿಯೇ ಸೆಲ್ಯೂಟ್‌ ಬಿಡುಗಡೆ ಮಾಡಲು ಒಪ್ಪಂದ ಮಾಡಿಕೊಳ್ಳಲಾಗಿತ್ತು ಎಂದು ಹೇಳಿದ್ದಾರೆ. ಕೊರೋನಾ ಕಾರಣದಿಂದ ಚಿತ್ರ ಬಿಡುಗಡೆ ತಡವಾಗಿದೆ. ನಿಗದಿತ ಅವಧಿಯೊಳಗೆ ಚಿತ್ರ ಬಿಡುಗಡೆ ಸಾಧ್ಯವಾಗದಿದ್ದರೆ ಓಟಿಟಿಯಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಥಿಯೇಟರ್ ಮಾಲೀಕರಿಗೆ ತಿಳಿಸಿದ್ದೇವು. ಚಿತ್ರಮಂದಿರಗಳನ್ನು ನಾವು ಸದಾ ಬೆಂಬಲಿಸಿದ್ದೇವೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!