ಮರಳಿ ಚೆನ್ನೈ ಫ್ರಾಂಚೈಸಿಗೆ ಡುಪ್ಲೆಸಿಸ್​​, ಮುಂಬೈ ಪಾಲಾದ ರಶೀದ್ ಖಾನ್​​!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮುಂದಿನ ವರ್ಷದ ಜನವರಿ ತಿಂಗಳಲ್ಲಿ ದ.ಆಫ್ರಿಕಾದಲ್ಲಿ ನಡೆಯುವ ಚೊಚ್ಚಲ ಟಿ20 ಕ್ರಿಕೆಟ್ ಲೀಗ್ ನಲ್ಲಿ ಒಟ್ಟು 6 ತಂಡಗಳು ಸೆಣಸಾಟ ನಡೆಸಲಿವೆ. ಎಲ್ಲ ತಂಡಗಳನ್ನು ಖರೀದಿಸುವಲ್ಲಿ ಇಂಡಿಯನ್​ ಪ್ರೀಮಿಯರ್ ಲೀಗ್​​ನ ಫ್ರಾಂಚೈಸಿಗಳು ಯಶಸ್ವಿಯಾಗಿದ್ದು, ಆಟಗಾರರ ಆಯ್ಕೆ ಪ್ರಕ್ರಿಯೆ ಶುರುವಾಗಿದೆ.
ಟಿ20 ಲೀಗ್​​ನಲ್ಲಿ ಪ್ರತಿ ಫ್ರಾಂಚೈಸಿ ಗರಿಷ್ಠ ಐವರು ಪ್ಲೇಯರ್ಸ್​ ಆಯ್ಕೆ ಮಾಡುವ ಅವಕಾಶವಿದೆ. ಈ ಆಯ್ಕೆಯ ಬಳಿಕ ಉಳಿದ ಆಟಗಾರರನ್ನು ಹರಾಜಿನ ಮೂಲಕ ಖರೀದಿಸಲಾಗುತ್ತದೆ. ಪ್ರತಿ ತಂಡ ದಕ್ಷಿಣ ಆಫ್ರಿಕಾದ 10 ಮತ್ತು ವಿದೇಶಿ 7 ಆಟಗಾರರ ಖರೀದಿಸಬಹುದು. ಪ್ಲೇಯಿಂಗ್​​ 11ನಲ್ಲಿ ದಕ್ಷಿಣ ಆಫ್ರಿಕಾದ 7 ಹಾಗೂ ವಿದೇಶದ 4 ಆಟಗಾರರು ಕಣಕ್ಕಿಳಿಯಲಿದ್ದಾರೆ.
ಇಂಡಿಯನ್​ ಪ್ರೀಮಿಯರ್ ಲೀಗ್​ನಲ್ಲಿ ರಾಯಲ್​ ಚಾಲೆಂಜರ್ಸ್ ಬೆಂಗಳೂರು ತಂಡದ ಕ್ಯಾಪ್ಟನ್​​ ಫಾಫ್ ಡುಪ್ಲೆಸಿಸ್​​ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಖರೀದಿಸಿದೆ. ಜೋಹಾನ್ಸ್​ಬರ್ಗ್ ತಂಡದ ಪರ ಅವರು ಆಡಲಿದ್ದಾರೆ.
ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಅಫ್ಘಾನಿಸ್ತಾನದ ರಶೀದ್ ಖಾನ್, ಲಿಯಾಮ್ ಲಿವಿಂಗ್‌ಸ್ಟೋನ್​, ಕಗಿಸೊ ರಬಾಡ ಮತ್ತು ಸ್ಯಾಮ್ ಕರ್ರನ್ ಜೊತೆಗೆ ಬೇಬಿ ಎಬಿಡಿ ಖ್ಯಾತಿಯ ಬ್ರೇವಿಸ್​ ಸಹ ಆಯ್ಕೆಯಾಗಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಎನ್ರಿಕ್ ನೋರ್ಕಿಯಾ, ಸನ್‌ರೈಸರ್ಸ್ ಹೈದರಾಬಾದ್​ ಫ್ರಾಂಚೈಸಿ ಏಡನ್ ಮಾರ್ಕ್ರಮ್​ ಅವರಿಗೆ ಮಣೆ ಹಾಕಿದೆ. ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಜೋಸ್ ಬಟ್ಲರ್, ಲಕ್ನೋ ಸೂಪರ್‌ಜೈಂಟ್ಸ್ ಫ್ರಾಂಚೈಸಿಯು ಕ್ವಿಂಟನ್ ಡಿಕಾಕ್ ಅವರನ್ನು ಆಯ್ಕೆ ಮಾಡಿದೆ.
ದಕ್ಷಿಣ ಆಫ್ರಿಕಾ ಚೊಚ್ಚಲ ಟಿ20 ಲೀಗ್​​ನಲ್ಲಿ ಮುಂಬೈ ಇಂಡಿಯನ್ಸ್​​ ಕೇಪ್​ ಟೌನ್​ ಫ್ರಾಂಚೈಸಿ ಖರೀದಿಸಿದ್ದು, ಸನ್​ರೈಸರ್ಸ್​ ಹೈದರಾಬಾದ್​​​ ಎಲಿಜಬೆತ್​​ ತಂಡ, ಲಖನೌ ಸೂಪರ್ ಜೈಂಟ್ಸ್​ ಡರ್ಬನ್ ತಂಡ​, ರಾಜಸ್ಥಾನ ರಾಯಲ್ಸ್ ಪಾರ್ಲ್​ ತಂಡ, ಡೆಲ್ಲಿ ಕ್ಯಾಪಿಟಲ್ಸ್​​ ಪ್ರಿಟೋರಿಯಾ ತಂಡವನ್ನು ಖರೀದಿ ಮಾಡಿದೆ.
ಕೋಲ್ಕತ್ತಾ ನೈಟ್​ ರೈಡರ್ಸ್ ಹಾಗೂ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಫ್ರಾಂಚೈಸಿ ಯಾವುದೇ ತಂಡವನ್ನ ಖರೀದಿಸಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!