ಭೀಕರ ರೈಲು ಅಪಘಾತ: ಬೊಲೆರೋ ವಾಹನಕ್ಕೆ ಡಿಕ್ಕಿಯೊಡೆದ ಡ್ಯುರೊಂಟೋ ಎಕ್ಸ್‌ಪ್ರೆಸ್‌

ಹೊಸದಿಗಂತ ಡಿಜಟಲ್‌ ಡೆಸ್ಕ್:‌ 

ಗುರುವಾರ ಮುಂಜಾನೆ ಡ್ಯುರೊಂಟೋ ಎಕ್ಸ್‌ಪ್ರೆಸ್ ರೈಲು ಬೊಲೆರೊ ವಾಹನಕ್ಕೆ ಡಿಕ್ಕಿ ಹೊಡೆದ ಘಟನೆ ಏಲೂರು ಜಿಲ್ಲೆಯ ಭೀಮಡೋಳು ರೈಲ್ವೆ ಗೇಟ್ ಬಳಿ ಸಂಭವಿಸಿದೆ. ಡಿಕ್ಕಿ ಪರಿಣಾಮ ವಾಹನ ನಜ್ಜುಗುಜ್ಜಾಗಿದೆ. ಬೊಲೆರೊ ವಾಹನ ನಿಯಂತ್ರಣ ತಪ್ಪಿ ರೈಲು ಗೇಟ್‌ಗೆ ಡಿಕ್ಕಿ ಹೊಡೆದು ಹಳಿ ಮೇಲೆ ನಿಂತಿದೆ. ಆ ವೇಳೆ ರೈಲು ಬಂದಾಗ ಪ್ರಯಾಣಿಕರು ವಾಹನ ಬಿಟ್ಟು ಓಡಿ ಹೋಗಿದ್ದಾರೆ.

ಡ್ಯುರೊಂಟೋ ಎಕ್ಸ್‌ಪ್ರೆಸ್ ವಾಹನಕ್ಕೆ ಡಿಕ್ಕಿ ಹೊಡೆದು ಹಳಿ ಮೇಲೆಯೇ ನಿಂತಿದೆ. ಅಪಘಾತಕ್ಕೆ ಕಾರಣವಾದ ವಾಹನದಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣಹಾನಿಯಾಗಿಲ್ಲ. ಘಟನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಿಕಂದರಾಬಾದ್‌ನಿಂದ ವಿಶಾಖಪಟ್ಟಣಕ್ಕೆ ಡ್ಯುರೊಂಟೋ ಎಕ್ಸ್‌ಪ್ರೆಸ್ ರೈಲು ಹೊರಟಿತ್ತು.

ಬೊಲೆರೊ ಹಳಿಯಲ್ಲಿ ಸಿಲುಕಿಕೊಂಡಿದ್ದು, ಡ್ಯೂರಂಟ್ ಎಕ್ಸ್‌ಪ್ರೆಸ್ ಸುಮಾರು 4 ಗಂಟೆಗಳ ಕಾಲ ಭೀಮಡೋಲುವಿನಲ್ಲಿ ಸಿಲುಕಿಕೊಂಡಿತು. ಆ ಮಾರ್ಗದಲ್ಲಿ ಹೋಗುವ ಎಲ್ಲಾ ರೈಲುಗಳ ಮಾರ್ಗ ಬದಲಾವಣೆ ಮಾಡಬೇಕಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!