ಹಬ್ಬದ ಸೀಸನ್‌ನಲ್ಲಿ ದಾಖಲೆ ಬರೆದ ಮೊಬೈಲ್‌ ಮಾರಾಟ : ಗಂಟೆಗೆ 56 ಸಾವಿರ ಮೊಬೈಲ್ ಸೇಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹಬ್ಬ ಹರಿದಿನ ಬಂತೆಂದರೆ ಎಲ್ಲರೂ ಶಾಪಿಂಗ್‌ನಲ್ಲಿ ಮುಳುಗಿರುತ್ತಾರೆ. ಆನ್ಲೈನ್‌ ಶಾಪಿಂಗ್‌ ಕಂಪನಿಗಳು ನೀಡುವ ಆಫರ್‌ಗಳಿಗೆ ಮಾರುಹೋಗುವ ಜನ ಗೃಹೋಪಯೋಗಿ ವಸ್ತುಗಳು, ಎಲೆಕ್ಟ್ರಿಕಲ್ ವಸ್ತುಗಳ ಜೊತೆಗೆ ಮೊಬೈಲ್ ಫೋನ್‌ಗಳನ್ನು ಹೆಚ್ಚು ಖರೀದಿಸುತ್ತಾರೆ. ಹೀಗಾಗಿಯೇ ಇ-ಕಾಮರ್ಸ್ ಕಂಪನಿಗಳು ಹಬ್ಬದ ಸಮಯದಲ್ಲಿ ಆಕರ್ಷಕ ಕೊಡುಗೆಗಳನ್ನು ಘೋಷಿಸುತ್ತವೆ.

ದಸರಾ ಹಬ್ಬದ ಸೀಸನ್ ಸೇಲ್-1 ರಲ್ಲಿ (ಸೆಪ್ಟೆಂಬರ್ 22-30) ಸುಮಾರು 40,000 ಕೋಟಿ ರೂ. ಬೆಲೆ ಬಾಳುವ ವಸ್ತುಗಳು ಮಾರಾಟವಾಗಿದೆ ಎಂದು ರೆಡ್‌ಸೀರ್ ಸ್ಟ್ರಾಟಜಿ ಕನ್ಸಲ್ಟಿಂಗ್ ವರದಿ ಅಂದಾಜಿಸಿದೆ. ವರದಿಯ ಪ್ರಕಾರ, ಈ ಮೊತ್ತವು ಕಳೆದ ವರ್ಷಕ್ಕಿಂತ ಸುಮಾರು ಶೇಕಡಾ 27ರಷ್ಟು ಹೆಚ್ಚಾಗಿದೆ. ಇವುಗಳಲ್ಲಿ ಹೆಚ್ಚಾಗಿ ಮೊಬೈಲ್ ಫೋನ್‌ಗಳ ಮಾರಾಟ ಕಂಡುಬಂದಿದ್ದು,  ಒಟ್ಟು ಸರಕು ಮೌಲ್ಯದಲ್ಲಿ (GMV) 41 ಪ್ರತಿಶತ ಅಂದರೆ ಸರಾಸರಿ 56,000 ಮೊಬೈಲ್ ಫೋನ್‌ಗಳು ಗಂಟೆಗೆ ಮಾರಾಟವಾಗಿವೆ ಎಂದು ಅಂದಾಜಿಸಿದೆ.

ಸೆಲ್ ಫೋನ್‌ಗಳ ಮಾರಾಟವು ಏಳು ಪಟ್ಟು, ಎಲೆಕ್ಟ್ರಾನಿಕ್ ಗೃಹೋಪಯೋಗಿ ಉಪಕರಣಗಳು ಐದು ಪಟ್ಟು ಹೆಚ್ಚಾಗಿದೆ ಮತ್ತು ಇತರ ವಿಭಾಗಗಳ ಮಾರಾಟವು ದ್ವಿಗುಣಗೊಂಡಿದೆ ಎಂದು ವರದಿ ಅಂದಾಜಿಸಿದೆ. ಆದಾಗ್ಯೂ, ಫ್ಯಾಷನ್ ಉತ್ಪನ್ನಗಳು 20ರಷ್ಟು ಪ್ರತಿಶತವನ್ನು ಹೊಂದಿದೆ. ಕಳದೆ ವರ್ಷಕ್ಕೆ ಹೋಲಿಸಿದರೆ 48 ಪ್ರತಿಶತದಷ್ಟು ಹೆಚ್ಚಾಗಿದೆ ಎಂದು ವರದಿ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!