spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, October 16, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ದಸರಾ ದರ್ಬಾರ್: ಮೈಸೂರು ಅರಮನೆಯಲ್ಲಿ ಆಯುಧ ಪೂಜೆ ಸಡಗರ

- Advertisement -Nitte

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಇಂದು ರಾಜ್ಯಾದ್ಯಂತ ಆಯುಧ ಪೂಜೆ ಸಂಭ್ರಮ ಮನೆಮಾಡಿದೆ.
ಅದರಲ್ಲಿಯೂ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ದರ್ಬಾರ್ ಜೋರಾಗಿದ್ದು, ಆಯುಧಪೂಜೆ ಸಡಗರ ಕಳೆಗಟ್ಟಿದೆ.
ಈ ಬಾರಿಯೋ ಕೊರೋನಾ ಸೋಂಕಿನ ಕಾರಣದಿಂದಾಗಿ ಅರಮನೆ ಆವರಣದಲ್ಲಿಯೇ ಎಲ್ಲ ಕಾರ್ಯಕ್ರಮಗಳು ನಡೆಯಲಿದ್ದು, ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.
ಬೆಳಗ್ಗಿನಿಂದಲೇ ಪೂಜಾ ವಿಧಿ ವಿಧಾನ ಆರಂಭವಾಗಿದ್ದು, ಮಹಾರಾಜರ ಆಯುಧಗಳನ್ನು ಅರಮನೆಯ ಕೋಡಿ ಸೋಮೇಶ್ವರ ದೇಗುಲಕ್ಕೆ ತರಲಾಗಿದೆ. 11 ಗಂಟೆಗೆ ಅರಮನೆ ಬಾಗಿಲಿಗೆ ಪಲ್ಲಕ್ಕಿ ತಂದು ನಿಲ್ಲಿಸಲಾಗುತ್ತದೆ. ಪಲ್ಲಕ್ಕಿಯಲ್ಲಿ ಯುದ್ಧ ಸಲಕರಣೆಗಳು ಇರಲಿವೆ. 11 ರಿಂದ 11:12ರ ಶುಭ ಮಹೂರ್ತದಲ್ಲಿ ಆಯುಧಪೂಜೆ ನಡೆಯಲಿದೆ. ಆಯುಧ ಪೂಜೆ ಹಿನ್ನೆಲೆ ಬೆಳಗ್ಗೆಯೇ ಆನೆಗಳಿಗೆ ಮಜ್ಜನ ಮಾಡಿಸಲಾಗಿದ್ದು, ಅರಮನೆ ಆವರಣಕ್ಕೆ ಕರೆತರಲಾಗಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss