ಹೊಸದಿಗಂತ ಆನ್ಲೈನ್ ಡೆಸ್ಕ್:
ಈಕ್ವಟೋರಿಯಲ್ ಗಿನಿಯಾದ ಬಾಟಾ ನಗರದ ಸೇನಾ ನೆಲೆಯಲ್ಲಿ ಪ್ರಬಲ ಡೈನಮೈಟ್ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ. 600ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಭಾನುವಾರ ಸಂಜೆ 4 ಗಂಟೆಗೆ ಈ ಸ್ಪೋಟ ಸಂಭವಿಸಿದ್ದು, ಸೇನಾ ನೆಲೆಯ ಡೈನಮೈಟ್ ಬಳಕೆಗೆ ಸಂಬಂಧಿಸಿದ ನಿರ್ಲಕ್ಷವೇ ಕಾರಣ ಬಾಂಬ್ ಸ್ಫೋಟಕ್ಕೆ ಕಾರಣ ಎಂದು ಅಧ್ಯಕ್ಷ ಟೆಯೊಡೊರೊ ಒಬಿಯಾಂಗ್ ಹೇಳಿದ್ದಾರೆ.
ಈ ಸ್ಫೋಟದ ಪರಿಣಾಮದಿಂದ ಬಾಟಾದ ಬಹುತೇಕ ಎಲ್ಲ ಮನೆಗಳಿಗೆ ಹಾನಿಯಾಗಿದೆ ಎಂದು ಹೇಳಿದ್ದಾರೆ.