spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಪ್ರಧಾನಿ ಮೋದಿ ಪಡೆದ ಸ್ಮರಣಿಕೆಗಳ ಇ-ಹರಾಜು: ನೀರಜ್ ಚೋಪ್ರಾ ಜಾವೆಲಿನ್ ಗೆ 1.5 ಕೋಟಿ ರೂ. ಬಿಡ್

- Advertisement -Nitte

ಹೊಸದಿಗಂತ ಆನ್ ಲೈನ್ ಡೆಸ್ಕ್:

ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಪದಕ ಗಳಿಸಿ ಕೊಟ್ಟ ತಾರೆಗಳ ಕ್ರೀಡಾ ಸಲಕರಣೆಗಳನ್ನು ಇ-ಹರಾಜಿಗೆ ಹಾಕಲಾಗಿದೆ ಎಂದು ಸಂಸ್ಕೃತಿ ಸಚಿವಾಲಯ ತಿಳಿಸಿದೆ.
ಪ್ರಧಾನಿ ಮೋದಿ ಸ್ವೀಕರಿಸಿದ ಸುಮಾರು 1,330 ಸ್ಮರಣಿಕೆ ಹಾಗೂ ಉಡುಗೊರೆಗಳಲ್ಲಿ ಚಿನ್ನದ ಪದಕ ವಿಜೇತರಾದ ಸುಮಿತ್ ಆಂಟಿಲ್ ಮತ್ತು ನೀರಜ್ ಚೋಪ್ರಾ ಬಳಸಿದ ಜಾವೆಲಿನ್ ಇ-ಹರಾಜಿನಲ್ಲಿ ಪ್ರಮುಖ ಅಂಶವಾಗಿದೆ.
ಟೋಕಿಯೊ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದ ಲೊವ್ಲಿನಾ ಬೊರ್ಗೊಹೈನ್ ಅವರ ಬಾಕ್ಸಿಂಗ್ ಗ್ಲೌಸ್ ಗೆ 1.92 ಕೋಟಿ ರೂ.ಗಳ ಬಿಡ್ ಪಡೆದಿದೆ.
ಭಾರತಕ್ಕೆ ಚಿನ್ನದ ಹುಡುಗ ಚೋಪ್ರಾ ಅವರ ಜಾವೆಲಿನ್ 1.55 ಕೋಟಿ ರೂ. ಬಿಡ್ ಪಡೆದಿದೆ.
ಕೃಷ್ಣ ನಗರ್ ಮತ್ತು ಯತಿರಾಜ್ ನ ಬ್ಯಾಡ್ಮಿಂಟನ್ ರಾಕೆಟ್ ಗಳಿಗೆ 80 ಲಕ್ಷ ಮತ್ತು 50 ಲಕ್ಷ ರೂ. ಬಿಡ್ ಮೊತ್ತ ಸೆಳೆದಿದೆ. ಚಿನ್ನದ ಪದಕ ವಿಜೇತ ಸುಮಿತ್ ಆಂಟಿಲ್ ಆಟೋಗ್ರಾಫ್ ಮಾಡಿದ ಜಾವೆಲಿನ್ ಗೆ 1.8 ಕೋಟಿ ರೂ. ಬಿಡ್ ಆಗಿದೆ.
50ಮೀ ಪಿಸ್ತೂಲ್ ಎಸ್ ಎಚ್ 1ಫೈನಲ್ ನಲ್ಲಿ ಚಿನ್ನದ ಪದಕ ಪಡೆದ ಮನೀಶ್ ನರ್ವಾಲ್ ಧರಿಸಿದ್ದ ಶೂಟಿಂಗ್ ಕನ್ನಡಕಗಳು 95.94ಲಕ್ಷ ರೂ.ಗಳ ಗರಿಷ್ಠ ಬಿಡ್ ಪಡೆದವು.
ಸಂಸ್ಕೃತಿ ಸಚಿವಾಲಯವು ಆಯೋಜಿಸಿರುವ ಇ-ಹರಾಜು ಶುಕ್ರವಾರದಿಂದ ಆರಂಭವಾಗಿದ್ದು ಅಕ್ಟೋಬರ್ 7 ರವರೆಗೆ ಮುಂದುವರಿಯಲಿದೆ. ಇಂತಹ ಹರಾಜಿನಲ್ಲಿ ಇದು ಮೂರನೇ ಆವೃತ್ತಿಯಾಗಿದ್ದು, ಇದರಲ್ಲಿ ವ್ಯಕ್ತಿಗಳು ಅಥವಾ ಸಂಸ್ಥೆಗಳು ವೆಬ್‌ಸೈಟ್ ಮೂಲಕ ಭಾಗವಹಿಸಬಹುದು: https://pmmementos.gov.in

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss