10ಸಾವಿರ ಉದ್ಯೋಗ ಕಡಿತಕ್ಕೆ ಮುಂದಾದ ಇ-ಕಾಮರ್ಸ್‌ ದೈತ್ಯ ಅಮೇಜಾನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಕಾರ್ಪೋರೇಟ್‌ ವಲಯದಲ್ಲಿ ಇದೀಗ ಬೃಹತ್‌ ಉದ್ಯೋಗ ಕಡಿತಗಳಾಗುತ್ತಿವೆ. ಟೆಕ್‌ ದೈತ್ಯ ಕಂಪನಿಗಳಾದ ಟ್ವೀಟರ್‌, ಮೆಟಾ ಸೇರಿದಂತೆ ಹಲವು ಕಂಪನಿಗಳು ಉದ್ಯೋಗಿಗಳನ್ನು ತೆಗೆದು ಹಾಕುತ್ತಿವೆ. ಇದೀಗ ಇ-ಕಾಂರ್ಸ್‌ ದೈತ್ಯ ಕಂಪನಿಯಾದ ಅಮೇಜಾನ್‌ ಬೃಹತ್‌ ಉದ್ಯೋಗ ಕಡಿತಕ್ಕೆ ಮುಂದಾಗಿದೆ.

ಅಮೆಜಾನ್ ಈ ವಾರದಲ್ಲಿಯೇ ಬೃಹತ್ ವಜಾಗಳನ್ನು ಕೈಗೊಳ್ಳಲು ತಯಾರಿ ನಡೆಸುತ್ತಿದೆ. ಸರಿಸುಮಾರು 10,000 ಉದ್ಯೋಗಗಳನ್ನು ಕಡಿತಗೊಳಿಸಲು ಅಮೇಜಾನ್‌ ಯೋಚಿಸುತ್ತಿದೆ ಎನ್ನಲಾಗಿದೆ. ಈ ಕಡಿತಗಳು ಹೆಚ್ಚಾಗಿ ಕಾರ್ಪೋರೇಟ್‌ ಮತ್ತು ತಂತ್ರಜ್ಞಾನ ವಲಯದಲ್ಲಿನ ಪಾತ್ರಗಳನ್ನು ಹೆಚ್ಚು ಪ್ರಭಾವಿಸುತ್ತವೆ ಎನ್ನಲಾಗಿದೆ. ಟ್ವಿಟರ್ ಅಂದಾಜು 4,400 ಗುತ್ತಿಗೆ ಕೆಲಸಗಾರರನ್ನು ನೋಟೀಸ್‌ ಇಲ್ಲದೇ ವಜಾಗೊಳಿಸಿದ ನಂತರ ಈ ಬೆಳವಣಿಗೆ ಬಂದಿದೆ.

ಇದರ ಹೊರತಾಗಿ ಅಮೇಜಾನ್‌ ಸಂಸ್ಥಾಪಕ ಜೆಫ್‌ ಬೆಜೋಸ್‌ ತಮ್ಮ ಆಸ್ತಿಯಲ್ಲಿ ಹೆಚ್ಚಿನ ಸಂಪತ್ತನ್ನು ಸಮಾಜಕ್ಕೆ ದಾನ ಮಾಡಲು ಯೋಚಿಸುತ್ತಿದ್ದಾರೆ. ಅವರು ಹವಾಮಾನ ಬದಲಾವಣೆಯನ್ನು ಎದುರಿಸಲು ಮತ್ತು ವಿಶ್ವ ಏಕತೆಯನ್ನು ಉತ್ತೇಜಿಸಲು ತಮ್ಮ 124 ಶತಕೋಟಿ ಡಾಲರ್‌ ಕೊಡುಗೆ ನೀಡುವುದಾಗಿ ಘೋಷಿಸಿದ್ದಾರೆ.

ಇದಲ್ಲದೇ ಕಳೆದ ವಾರದಲ್ಲಿ 1 ಟ್ರಿಲಿಯನ್‌ ಡಾಲರ್‌ ಗಳಷ್ಟು ಮಾರುಕಟ್ಟೆ ಮೌಲ್ಯವನ್ನು ಅಮೇಜಾನ್‌ ಕಳೆದುಕೊಂಡಿದೆ ಎಂದು ವರದಿಯಾಗಿದೆ. ಜಗತ್ತಿನಲ್ಲಿ ಆರ್ಥಿಕ ಕುಸಿತದ ಭೀತಿ, ಜಾಗತಿಕ ಹಣದುಬ್ಬರ ಈ ಎಲ್ಲ ಅಂಶಗಳಿಂದ ಪ್ರೇರಿತವಾಗಿ ಕಾರ್ಪೋರೇಟ್‌ ವಲಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ಕಡಿತಗಳು ನಡೆಯುತ್ತಿವೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!