ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನಲ್ಲಿ ಹಲವು ದಿನಗಳ ಬಳಿಕ ಸುರಿದ ಭಾರೀ ಮಳೆಗೆ ಮೆಜೆಸ್ಟಿಕ್, ಕಾರ್ಪೊರೇಷನ್, ಹೆಬ್ಬಾಳ, ಮಲ್ಲೇಶ್ವರಂ ಮತ್ತು ಯಶವಂತಪುರ ಸೇರಿ ನಗರದ ಹಲವು ಕಡೆ ಸವಾರರು ಪರದಾಟ ನಡೆಸಿದ್ದಾರೆ.
ತಡರಾತ್ರಿ ಸುರಿದ ಗುಡುಗು ಸಹಿತ ಸುರಿದ ಭಾರೀ ಮಳೆಗೆ, ನಗರದಾದ್ಯಂತ ಸುಮಾರು 60ಮಿ.ಮೀ ಮಳೆಯಾಗಿದೆ. ಹಲವೆಡೆ ತಡರಾತ್ರಿಯಿಂದ ಬೆಳಗ್ಗೆ 7ರವರೆಗೆ ಮಳೆ ಸುರಿದಿದೆ. ಮುಂದಿನ ಮೂರ್ನಾಲ್ಕು ದಿನಗಳ ಕಾಲ ಇದೇ ಪರಿಸ್ಥಿತಿ ಮುಂದುವರಿಯುವ ನಿರೀಕ್ಷೆಯಿದೆ.
ವಿಂಡ್ಸರ್ ಮ್ಯಾನರ್ ಸೇತುವೆ ವಸತಿ ರಸ್ತೆಯು ಕೆರೆಯಂತಿದೆ. ಅರ್ಧ ಮೀಟರ್‌ಗೂ ಹೆಚ್ಚು ನೀರು ತುಂಬಿ ತುರ್ತು ಪರಿಸ್ಥಿತಿ ಉಂಟು ಮಾಡಿದೆ. ಚಿಕ್ಕಪೇಟೆ ಮೆಟ್ರೊ ನಿಲ್ದಾಣದ ರಸ್ತೆ ಸಂಪೂರ್ಣ ಜಲಾವೃತವಾಗಿದೆ.