ಆರ್ಟೆಮಿಸ್-1 ಕಳುಹಿಸಿದ ಭೂಮಿ ಗೋಚರಿಸುವಿಕೆಯ ಅದ್ಭುತ ವೀಡಿಯೊ ಬಿಡುಗಡೆ ಮಾಡಿದ ನಾಸಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

2025ರ ವೇಳೆಗೆ ಚಂದ್ರನ ಮೇಲೆ ಗಗನಯಾತ್ರಿಗಳನ್ನು ಕಳುಹಿಸಲು ನಾಸಾ ಪ್ರಯತ್ನಿಸುತ್ತಿದೆ. ಇದರ ಭಾಗವಾಗಿ, ಆರ್ಟೆಮಿಸ್-1 ಅನ್ನು ಚಂದ್ರನ ಮೊದಲ ಮಿಷನ್ ಆಗಿ ಉಡಾವಣೆ ಮಾಡಲಾಯಿತು. ಕಳೆದ ಎರಡು ಬಾರಿ ತಾಂತ್ರಿಕ ಕಾರಣಗಳಿಂದ ಉಡಾವಣೆ ಮುಂದೂಡಲಾಗಿತ್ತು. ಬುಧವಾರ ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಆರ್ಟೆಮಿಸ್-1 ಮಿಷನ್ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ್ದು, ಆರ್ಟೆಮಿಸ್-‌1ಕೆಲ ಅಪರೂಪದ ಫೋಟೋ, ವಿಡಿಯೋಗಳನ್ನು ಕಳಿಸಿದೆ.

ನಾಸಾದ ಆರ್ಟೆಮಿಸ್-1 ಇದೇ ತಿಂಗಳ 21ಕ್ಕೆ ಚಂದ್ರನನ್ನು ತಲುಪಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಈ ರಾಕೆಟ್ ಉಡಾವಣೆಯಾದ ಸ್ವಲ್ಪ ಸಮಯದ ಬಳಿಕ ಭೂಮಿಯ ಚಿತ್ರ ಸ್ಪಷ್ಟವಾಗಿ ಗೋಚರಿಸುತ್ತದೆ. ಆರ್ಟೆಮಿಸ್-1 ಆರೋಹಣವಾಗುತ್ತಿದ್ದಂತೆ, ಭೂಮಿಯು ವೃತ್ತಾಕಾರವಾಗಿ ಕೆಳಗೆ ಹೋಗುತ್ತಿರುವಂತೆ ಕಾಣುವ ವಿಡಿಯೋವನ್ನು ನಾಸಾ ವಿಜ್ಞಾನಿಗಳು ಬಿಡುಗಡೆ ಮಾಡಿದ್ದಾರೆ. ಈ ವಿಡಿಯೋದಲ್ಲಿ ಭೂಮಿಯ ಆಕಾರ ಸ್ಪಷ್ಟವಾಗಿ ಗೋಚರಿಸುತ್ತದೆ.

ನಾಸಾ ಪ್ರಕಾರ, 2024 ರ ಅಂತ್ಯ, 2025 ರ ಮೊದಲಿಗೆ ಚಂದ್ರನ ಮೇಲೆ ಗಗನಯಾತ್ರಿಗಳ ತಂಡವನ್ನು ಕಳುಹಿಸುವ ಗುರಿಯನ್ನು ಹೊಂದಿದೆ. ಇದರ ಭಾಗವಾಗಿ, ನಾಸಾ ಮೊದಲ ಮಾನವರಹಿತ ಆರ್ಟೆಮಿಸ್-1 ರಾಕೆಟ್ ಅನ್ನು ಚಂದ್ರನತ್ತ ಉಡಾವಣೆ ಮಾಡಿದೆ. ಈ ಮಿಷನ್ ಯಶಸ್ವಿಯಾದರೆ, ಚಂದ್ರನ ಹೊರತಾಗಿ ಮಂಗಳ ಮತ್ತು ಇತರ ಗ್ರಹಗಳಿಗೆ ಹೋಗುವುದು ಸುಲಭ ಎಂದು ನಾಸಾ ವಿಶ್ವಾಸ ವ್ಯಕ್ತಪಡಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!