spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, December 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಭೂಕಂಪನ ಭೀತಿ: ಗಡಿಕೇಶ್ವಾರ ಗ್ರಾಮಗಳ ನಿವಾಸಿಗಳಿಗೆ ಸುರಕ್ಷಿತವಾಗಿರಲು ಸೂಚನೆ

- Advertisement -Nitte

ದಿಗಂತ ವರದಿ ಕಲಬುರಗಿ:

ಭೂಕಂಪನದಿಂದ ತೊಂದರೆಗೆ ಒಳಗಾಗಿರುವ ಗಡಿಕೇಶ್ವಾರ ಮತ್ತು ಸುತ್ತಮುತ್ತಲಿನ ಗ್ರಾಮಗಳ ಜನರು ಸುರಕ್ಷಿತ ಸ್ಥಳಗಳಲ್ಲಿ ವಾಸಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ವಿ. ವಿ. ಜ್ಯೋತ್ಸ್ನಾ ಅವರು ಸಲಹೆ ನೀಡಿದರು.

ಕಲಬುರಗಿ ಜಿಲ್ಲೆಯ ಕಾಳಗಿ ತಾಲ್ಲೂಕಿನ ಹೊಸಳ್ಳಿ-ಹೆಚ್ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿಗಳ ನಡೆ- ಹಳ್ಳಿ ಕಡೆ ಎಂಬ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭೂಕಂಪನಕ್ಕೆ ಅಂಜದೆ ಧೈರ್ಯದಿಂದ ಇರಬೇಕು ಎಂದು ಗ್ರಾಮಸ್ಥರಲ್ಲಿ ಆತ್ಮಸ್ಥೈರ್ಯ ತುಂಬಿದರು.
ಪ್ರವಾಹದಂತೆ ಭೂಕಂಪನದ ಮುನ್ಸೂಚನೆಯನ್ನು ಮೊದಲೇ ಅರಿಯಲು ಸಾಧ್ಯವಿಲ್ಲ. ಎಂತಹ ವಿಜ್ಞಾನಿಗಳೂ ಅಥವಾ ಯಾವುದೇ ಭಾರಿ ಯಂತ್ರಗಳೂ ಕೂಡ ಸಂಭವಿಸಬಹುದಾದ ಭೂಕಂಪವನ್ನು ಪತ್ತೆಹಚ್ಚಲು ಸಾಧ್ಯವಿಲ್ಲ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ಭೂಕಂಪನದ ಗ್ರಾಮಗಳ ಮನೆಗಳ ಸುರಕ್ಷಿತವಾಗಿರುವ ಬಗ್ಗೆ ಸರ್ವೇ ನಡೆಯುತ್ತಿದೆ. ಗಟ್ಟಿಮುಟ್ಟಾಗಿರುವ ಮನೆಗಳ ಜನರು ಅವರವರ ಮನೆಗಳಲ್ಲೇ ಉಳಿದುಕೊಳ್ಳಬಹುದು. ‌ಅಸುರಕ್ಷಿತ ಮನೆಗಳ ಸದಸ್ಯರು ಸರ್ಕಾರದ ವತಿಯಿಂದ ನಿರ್ಮಿಸಿರುವ ತಾತ್ಕಾಲಿಕ ಶೆಡ್ ಗಳಲ್ಲಿ ತಂಗಬಹುದು ಎಂದರು.
ಮನೆಗಳ ಸಮೀಕ್ಷೆ ಸಂದರ್ಭದಲ್ಲಿ ಉಳ್ಳವರು ಕೋಣೆ ಮತ್ತಿತರವುಗಳ ಮಾರ್ಪಾಡು ಮಾಡಿಕೊಳ್ಳಬೇಕು ಎಂದು ತಿಳಿಸಿದ ಅವರು ಆರ್ಥಿಕವಾಗಿ ಸದೃಢವಿಲ್ಲದವರ ಮನೆಗಳ ರಚನೆಯನ್ನು ಸರ್ಕಾರಿ ವೆಚ್ಚದಲ್ಲೇ ಮಾರ್ಪಾಡು ಮಾಡಲಾಗುವುದು ಎಂದು ತಿಳಿಸಿದರು.

ಪ್ರವಾಹ, ಕೋವಿಡ್ ಮುಂತಾದ ಸಂದರ್ಭದಲ್ಲಿ ಜಿಲ್ಲೆಯನ್ನು ಸುತ್ತಿದ್ದೇನೆ ಅದರೆ, ಹೊಸಳ್ಳಿ- ಹೆಚ್ ಗ್ರಾಮದಲ್ಲಿನ ಜನರ ಪ್ರೀತಿಯಾದರಗಳನ್ನು ಎಲ್ಲಿಯೂ ಕಂಡಿಲ್ಲ ಎಂದು ಸಂತಸ ವ್ಯಕ್ತಪಡಿಸಿದರು.

ಭೂಕಂಪನ ಸಂದರ್ಭದಲ್ಲಿ ಜನರಲ್ಲಿ ಭಯ-ಆತಂಕ ಮನೆಮಾಡಿರುತ್ತೆ. ಆದರೆ, ನಿಮ್ಮಲ್ಲಿ ಅದೆಲ್ಲಾ ಮರೆಯಾಗಿ ಪ್ರೀತಿಯ ಭಾವ ಕಾಣುತ್ತಿದೆ ಎಂದು ಹೆಮ್ಮೆಯಿಂದ ನುಡಿದರು.

ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಪಿಂಚಣಿ ಸಮಸ್ಯೆ, ಪಹಣಿ,ಆಧಾರ್, ಚುನಾವಣಾ ಗುರುತಿನ ಪತ್ರ ತಿದ್ದುಪಡಿ ಮುಂತಾದ ಸಮಸ್ಯೆಗಳನ್ನು ಪರಿಹರಿಸಲಾಗುವುದು. ಇದರ ಸದುಪಯೋಗ ಗ್ರಾಮಸ್ಥರು ಪಡೆದುಕೊಳ್ಳಬೇಕು ಎಂದು ಅವರು ಕರೆ ನೀಡಿದರು

ಈ ಸಂದರ್ಭದಲ್ಲಿ ಕಲಬುರಗಿ ಜಿಲ್ಲಾ ಪಂಚಾಯತ್ ಸಿ.ಇ.ಓ ಡಾ.ದಿಲೀಷ್ ಶಶಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಶೇಕಡ 100ರಷ್ಟು ಕೋವಿಡ್ ವ್ಯಾಕ್ಸಿನ್ ಲಸಿಕೆ ಹಾಕುವ ಗುರಿಹೊಂದಲಾಗಿದೆ. ಅದ್ದರಿಂದ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಗ್ರಾಮಸ್ಥರಿಗೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಹಾಯಕ ಅಯುಕ್ತೆ ಮೋನಾ ರೂಟ್, ಭೂ ದಾಖಲೆಗಳ ಉಪ ನಿರ್ದೇಶಕ ಶಂಕರ, ಕೃಷಿ ಇಲಾಖೆ ಉಪನಿರ್ದೇಶಕ ಸಮದ್ ಪಟೇಲ್, ತಹಶೀಲ್ದಾರ ನಾಗನಾಥ ತರಗೆ, ತಾಲೂಕ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಅನೀಲ್ ರಾಠೋಡ, ಹಲಚೇರಾ ಗ್ರಾ.ಪಂ. ಅಧ್ಯಕ್ಷ ಶಿವಗಂಗಾ ಅಂಬ್ರೀಶ್, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಶರಣಗೌಡ ಮಾಲಿಪಾಟೀಲ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹೆಬೂಬ ಪಟೇಲ್ ಸೇರಿದಂತೆ ಇನ್ನಿತರ ಕಂದಾಯ ಇಲಾಖೆ ಅಧಿಕಾರಿಗಳು ಇದ್ದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss