Monday, August 15, 2022

Latest Posts

ಭೂ ಕಂಪನ ಹಿನ್ನೆಲೆ| ಇನ್ನೆರಡು ದಿನಗಳಲ್ಲಿ ಕೇಂದ್ರ ತಂಡ ಭೇಟಿ: ಶಾಸಕ ರಾಜಕುಮಾರ್ ಪಾಟೀಲ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ವರದಿ ಕಲಬುರಗಿ:

ಜಿಲ್ಲೆಯ ಚಿಂಚೋಳಿ ತಾಲೂಕಿನ ಹಲವೆಡೆಗಳಲ್ಲಿ ಭೂ ಕಂಪನವಾದ ಹಿನ್ನೆಲೆಯಲ್ಲಿ ಕೇಂದ್ರದ ತಂಡವು ಎರಡು-ಮೂರು ದಿನಗಳಲ್ಲಿ ಭೇಟಿ ನೀಡಲಿದ್ದಾರೆ ಎಂದು ಶಾಸಕ ರಾಜಕುಮಾರ್ ಪಾಟೀಲ್ ತಿಳಿಸಿದ್ದಾರೆ.

ಅವರು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ,ಅಧ್ಯಯನಕ್ಕಾಗಿ ಮೂರು ದಿನಗಳಲ್ಲಿ ಕೇಂದ್ರದ ತಂಡ ಆಗಮಿಸಲಿದೆ. ಪದೇ ಪದೇ ಭೂಮಿ ಕಂಪಿಸಲು ಕಾರಣ ಹುಡುಕುವ ಯತ್ನವನ್ನು ಈ ತಂಡ ಮಾಡಲಿದೆ ಎಂದರು.

ನೆಲದಲ್ಲಿ ಲೈನ್ ಸ್ಟೋನ್ ಕಾರಣಕ್ಕೆ ಭೂಮಿ ಕಂಪನ ಮಾಡುತ್ತದೆ. ಗಣಿ ಭೂ ವಿಜ್ಞಾನ ಇಲಾಖೆಗೆ ಈಗಾಗಲೇ ವರದಿ ಸಲ್ಲಿಸಲಾಗಿದೆ ಎಂದರು.

ಚಿಂಚೋಳಿ ತಾಲೂಕಿನ ಹಲವೆಡೆ ಕಂಪಿನ ಸದ್ದು ಮಾಡಿರುವುದರಿಂದ, ಸ್ಥಳಕ್ಕೆ ನಾನು ಮತ್ತು ಸಂಸದ ಉಮೇಶ್ ಜಾಧವ ಭೇಟಿ ನೀಡಿದ್ದೇವೆ. ಜನ ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ ಎಂದರು.

ಕಲಬುರಗಿ ಸಂಸದ ಉಮೇಶ್ ಜಾಧವ ಮಾತನಾಡಿ, ಜಿಲ್ಲೆಯಲ್ಲಿ ಹಲವೆಡೆ ಭೂಮಿ ಕಂಪಿಸಿದ್ದು, ಇದೆ ಮೊದಲ ಬಾರಿ ಅಲ್ಲ. ಹಿಂದೆಯೂ ಹಲವು ವಷ೯ಗಳಿಂದ ಈ ತರಹದ ಅನುಭವವಾಗಿದೆ ಎಂದರು.

ಪ್ರತಿ ಬಾರಿ ಭೂ ಕಂಪಿಸಿದ ಶಬ್ದದಿಂದ ಜನರು ಗಾಭರಿಗೊಂಡು ಹೊರ ಬಂದು, ರಾತ್ರಿ ಪೂರ್ತಿ ಜಾಗರಣೆ ಮಾಡಿದ್ದಾರೆ ಎಂದರು.

ಈ ವಿಷಯವನ್ನು ನಾನು ಗಂಭೀರವಾಗಿ ಪರಿಗಣಿಸಿ, ಜನರ ಜೊತೆ ಮಾತನಾಡಿ ಸರಕಾರದಿಂದ ಸಮಸ್ಯೆ ಬಗೆಹರಿಸಲು ಕೆಲಸ ಮಾಡುವುದಾಗಿ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss