ನೇಪಾಳದಲ್ಲಿ ಮತ್ತೆ ಭೂಕಂಪನ: 4.2 ತೀವ್ರತೆ ದಾಖಲು

ಹೊಸದಿಗಂತ ಡಿಜಿಟಲ್ ಡೆಸ್ಕ್:

ನೇಪಾಳದ ಅಚಾಮ್ ಜಿಲ್ಲೆಯ ಬಬಾಲಾದಲ್ಲಿ ಮಂಗಳವಾರ ಸಂಜೆ ಮತ್ತೆ ಭೂಕಂಪ ಸಂಭವಿಸಿದೆ.

ಈ ಕುರಿತು ಮಾಹಿತಿ ನೀಡಿದ ರಾಷ್ಟ್ರೀಯ ಭೂಕಂಪನ ಮಾನಿಟರಿಂಗ್ ಮತ್ತು ರಿಸರ್ಚ್ ಸೆಂಟರ್, ಸಂಜೆ 6:18 ಕ್ಕೆ ಭೂಕಂಪನ ವಾಗಿದ್ದು, 4.2 ತೀವ್ರತೆ ದಾಖಲಾಗಿದೆ. ಒಂದು ವಾರದೊಳಗೆ ನಾಲ್ಕನೇ ಭೂಕಂಪವಾಗಿದೆ.

ನೇಪಾಳದಲ್ಲಿ ಸಂಭವಿಸಿದ ಕೊನೆಯ ಭೂಕಂಪದಲ್ಲಿ ಹಲವು ಮನೆಗಳು ಕುಸಿದು ಬಿದ್ದಿದ್ದು, ನಂತರದ ಕಂಪನಗಳ ನಂತರ ಸಂಭವಿಸಿದ ಘಟನೆಯಿಂದ ಸಾವಿನ ಸಂಖ್ಯೆ 6 ಕ್ಕೆ ಏರಿದೆ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.

ಉತ್ತರಾಖಂಡ-ನೇಪಾಳ ಗಡಿಯುದ್ದಕ್ಕೂ ಹಿಮಾಲಯ ಪ್ರದೇಶದಲ್ಲಿ ನವೆಂಬರ್ 8 ಮತ್ತು 12 ರ ನಡುವೆ ಕನಿಷ್ಠ ಎಂಟು ಬಾರಿ ಭೂಕಂಪಗಳಿಗೆ ಸಾಕ್ಷಿಯಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಅಂಕಿಅಂಶಗಳು ತೋರಿಸಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!