Wednesday, August 10, 2022

Latest Posts

ಗುಜರಾತ್ʼನ ದ್ವಾರಕಾದಲ್ಲಿ ಭೂ ಕಂಪನ: 5.0ರಷ್ಟು ತೀವ್ರತೆ ದಾಖಲು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗುಜರಾತ್ʼನ ದ್ವಾರಕಾದಲ್ಲಿ ಗುರುವಾರ ಮಧ್ಯಾಹ್ನ ಭೂಕಂಪನದ ಅನುಭವವಾಗಿದೆ. ನ್ಯಾಷನಲ್ ಸೆಂಟರ್ ಫಾರ್ ಸಿಸ್ಮಾಲಜಿ ಪ್ರಕಾರ, ಮಧ್ಯಾಹ್ನ 3.15ಕ್ಕೆ ಭೂಮಿ ಕಂಪಿಸಿದ ಅನುಭವವಾಗಿದ್ದು, ರಿಕ್ಟರ್ ಮಾಪಕದಲ್ಲಿ 5.0ರಷ್ಟು ತೀವ್ರತೆ ದಾಖಲಾಗಿದೆ.
ಕಂಪನದ ಅನುಭವವಾದ ತಕ್ಷಣ ಭಯಭೀತರಾದ ಜನ ಮನೆಗಳಿಂದ ಹೊರ ಓಡಿ ಬಂದಿದ್ದಾರೆ . ಇನ್ನು ಆದಾಗ್ಯೂ, ಈ ಕಂಪನದಿಂದಾಗಿ ಯಾವುದೇ ಜೀವ ಅಥವಾ ಆಸ್ತಿ ಹಾನಿ ವರದಿಯಾಗಿಲ್ಲ.
ವರದಿಯ ಪ್ರಕಾರ, ಭೂಕಂಪದ ಕೇಂದ್ರ ಬಿಂದು ಗುಜರಾತ್ʼನ ದ್ವಾರಕಾದಿಂದ ವಾಯುವ್ಯಕ್ಕೆ 223 ಕಿಲೋಮೀಟರ್ ದೂರದಲ್ಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss